ದಾಖಲೆಯಿಲ್ಲದೇ ಸಾಗಿಸುತ್ತಿದ್ದ ಹಣ ವಶ

ಬುಧವಾರ, 13 ಮಾರ್ಚ್ 2019 (15:48 IST)
ಚುನಾವಣೆಗೆ ದಿನಗಣನೆ ಆರಂಭಗೊಂಡ ಬೆನ್ನಲ್ಲೇ ಅಧಿಕಾರಿಗಳು ನೀತಿ ಸಂಹಿತೆ ಪಾಲಿಸುತ್ತಿದ್ದು, ತಪಾಸಣೆ ಬಿಗಿಗೊಳಿಸಿದ್ದಾರೆ. ಇದರಿಂದಾಗಿ ಅಕ್ರಮವಾಗಿ ಹಣ ಸಾಗಾಟ ಮಾಡುತ್ತಿದ್ದವರು ಸಿಕ್ಕಿ ಹಾಕಿಕೊಂಡಿದ್ದಾರೆ.

ದಾಖಲೆಗಳಿಲ್ಲದೆ ಜೀಪಿನಲ್ಲಿ ಸಾಗಾಟ ಮಾಡುತ್ತಿದ್ದ ಲಕ್ಷಾಂತರ ರೂ. ನಗದನ್ನು ಕಾರ್ಕಳ ಪೊಲೀಸರು ರಾತ್ರಿ ಮಾಳ ಚೆಕ್ ಪೊಸ್ಟ್ ನಲ್ಲಿ ವಶಪಡಿಸಿಕೊಂಡಿದ್ದಾರೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪೊಲೀಸರು ಮಾಳ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ಮಾಡುತ್ತಿದ್ದ ವೇಳೆ ಜೀಪಿನಲ್ಲಿ ದಾಖಲೆ ಇಲ್ಲದ 1,50,000 ರೂ. ನಗದು ಪತ್ತೆಯಾಗಿದೆ.

ಇದು ಕಾರಿನಲ್ಲಿದ್ದ ಬಾಲಕೃಷ್ಣ ಮತ್ತು ಸೈಯದ್ ಮುಹಿನುಲ್ಲಾ ಎಂಬುವರಿಗೆ ಸೇರಿದ್ದು ಎಂದು ತಿಳಿದು ಬಂದಿದೆ. ಈ ಹಣವನ್ನು ಪೊಲೀಸರು ಕಾರ್ಕಳ ತಹಶೀಲ್ದಾರ್ ಅವರಿಗೆ ಹಸ್ತಾಂತರಿಸಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ