Kerala Monsoon: ರೈತರಿಗೆ ಮುಂಗಾರಿನ ಸಿಹಿ ಸುದ್ದಿ, ಕೇರಳಕ್ಕೆ ಎಂಟ್ರಿ ಕೊಟ್ಟ ವರುಣ

Krishnaveni K

ಶನಿವಾರ, 24 ಮೇ 2025 (14:18 IST)
ತಿರುವನಂತಪುರಂ: ಈ ಬಾರಿ ಮುಂಗಾರು ಬೇಗನೇ ಬರಲಿದೆ ಎಂಬ ಹವಾಮಾನ ಭವಿಷ್ಯ ನಿಜವಾಗಿದೆ. ಅವಧಿಗೆ ಮುನ್ನವೇ ಕೇರಳಕ್ಕೆ ಮುಂಗಾರು ಆಗಮನವಾಗಿದೆ. ಇಂದು ಬೆಳಿಗ್ಗೆಯಿಂದಲೇ ಕೇರಳದಲ್ಲಿ ಭಾರೀ ಮಳೆಯಾಗುತ್ತಿದೆ.
 

ಪ್ರತೀ ವರ್ಷ ಮುಂಗಾರು ಆಗಮನ ಜೂನ್ 1 ಅಥವಾ ಜೂನ್ ಮೊದಲ ವಾರದಲ್ಲಿ ಆಗುತ್ತದೆ. ಆದರೆ ಈ ಬಾರಿ ಮೇ ಕೊನೆಯ ವಾರಕ್ಕೇ ಎಂಟ್ರಿ ಕೊಟ್ಟಿದೆ. ನಿನ್ನೆಯಿಂದಲೂ ಕೇರಳದಲ್ಲಿ ಮಳೆಯ ವಾತಾವರಣವಿದೆ. ಇಂದು ಅಧಿಕೃತವಾಗಿ ಮುಂಗಾರು ಆಗಮನವಾಗಿದೆ.

ಕರ್ನಾಟಕದಲ್ಲೂ ಇದೀಗ ಮೋಡ ಕವಿದ ವಾತಾವರಣವಿದ್ದು ಇಂದು ಸಂಜೆಯಿಂದ ಭಾರೀ ಮಳೆ ನಿರೀಕ್ಷಿಸಲಾಗಿದೆ. 16 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮುಂಗಾರು ಮಳೆ ಇಷ್ಟು ಬೇಗನೇ ಆಗುತ್ತಿದೆ. ಅವಧಿಗಿಂತ 8 ದಿನಗಳ ಮೊದಲೇ ಮಳೆಯಾಗಿರುವುದು ವಿಶೇಷ.

ಈ ಬಾರಿ ಮುಂಗಾರು ಅತೀ ಶಕ್ತವಾಗಿ ಸುರಿಯಲಿದೆ ಎಂದು ಈಗಾಗಲೇ ಹವಾಮಾನ ಇಲಾಖೆ ವರದಿ ನೀಡಿದೆ. ಸೆಪ್ಟೆಂಬರ್ ವರೆಗೂ ಭಾರೀ ಮಳೆಯಾಗುವ ಸೂಚನೆ ನೀಡಿದೆ. ಬೇಸಿಗೆ ಮಳೆಯೂ ಈ ಬಾರಿ ಉತ್ತಮವಾಗಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ