ರಾಜ್ಯಾದ್ಯಂತ ಬಹುತೇಕ ಕಡೆ ಮಾನ್ಸೂನ್ ದುರ್ಬಲ: ಕರಾವಳಿಯ ಮಳೆಯ ಆರ್ಭಟ

ಬುಧವಾರ, 28 ಜುಲೈ 2021 (15:54 IST)
ಬೆಂಗಳೂರು: ಜುಲೈ 28 ರಿಂದ ಆಗಸ್ಟ್ 1  ರವರೆಗೆ ಹವಾಮಾನ ಸ್ಥಿತಿ ಗತಿಗಳ ಕುರಿತು ಹವಾಮಾನ ಇಲಾಖೆಯ ನಿರ್ದೇಶಕರು ವಿಜ್ಞಾನಿಯಾದ  ಸಿ.ಎಸ್.ಪಾಟೀಲ್ ಮಾಹಿತಿ ನೀಡಿದ್ದು, ಇಂದು ಕರಾವಳಿ ಪೋರದೇಶದಲ್ಲಿ ವ್ಯಾಪಕ ಮಳೆಯಾಗಿದ್ದು, ಉತ್ತರ ಹಾಗು ದಕ್ಷಿಣ ಒಳನಾಡಿನಲ್ಲಿ ಕೆಲವು ಕಡೆ ಮಾತ್ರ ಮಳೆಯಾಗಿದೆ ಎಂದಿದ್ದಾರೆ.
 
ಕರ್ನಾಟಕ  ರಾಜ್ಯಾದೆಂತ ಮಾನ್ಸೂನ್ ದುರ್ಭಲವಾಗಿದೆ ಹೀಗಿದ್ದರೂ ಉತ್ತರ ಕನ್ನಡ ಜಿಲ್ಲೆಯ ಕಾರ್ಕಳದಲ್ಲಿ 4  ಸೆ. ಮೀ ,ಶಿವಮೊಗ್ಗ ಜಿಲ್ಲೆಯ  ಹುಂಚದಕಟ್ಟೆ ಯಲ್ಲಿ 3 ಸೆ. ಮೀ ಮಳೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ. 
 
ಈಗಿರುವ ಸ್ಥಿತಿಗತಿ ವಿವರಿಸುತ್ತಾ ಕರಾವಳಿ ಪ್ರದೇಶದಲ್ಲಿ ಕಡಿಮೆ ಒತ್ತಡವಿರುವ ವಿಸ್ತರಿಸಿದ ಪ್ರದೇಶವಿದೆ, ಜುಲೈ 28  ರಿಂದ ಆಗಸ್ಟ್ 1  ರವರೆಗೆ ಕರ್ನಾಟಕದ  ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ, ಉತ್ತರ ಹಾಗು ದಕ್ಷಿಣ ಒಳನಾಡಿನಲ್ಲಿ ಕೆಲವು ಕಡೆ ಮಾತ್ರ ಮಳೆಯಾಗುವ ಸಂಭವವಿದೆ ಎಂದಿದ್ದಾರೆ. 
 
ಬೆಂಗಳೂರು ನಗರದ ಹವಾಮಾನ ಮುನ್ಸೂಚನೆ:
 
ರಾಜಧಾನಿಯಲ್ಲಿ ಮುಂದಿನ ಎರಡು ದಿನದವರೆಗೆ ಕೆಲವು ಕಡೆ ಮಾತ್ರ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದು , ಗರಿಷ್ಟ ಉಷ್ಣಾಂಶ 28 ಡಿಗ್ರಿ ಸೆ  ಹಾಗು ಕನಿಷ್ಠ ಉಷ್ಣಾಂಶ 20  ಡಿಗ್ರಿ ಸೆ ದಾಖಲಾಗಿದೆ ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ