ಬೆಂಗಳೂರಿನ ಮಳೆಗೆ 540ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗೆ

ಗುರುವಾರ, 25 ಮೇ 2023 (14:38 IST)
ಕಳೆದ ಎರಡು ದಿನಗಳಿಂದ ಬೀಳುತ್ತಿರುವ ಧಾರಾಕಾರ ಮಳೆಗೆ ಬೆಂಗಳೂರಿನ ಜನರ ಜೀವನ ಅರ್ಥವ್ಯಸ್ತಾಗಿದೆ, ಜನರ ಜೀವನ ಅಷ್ಟೇ ಅಲ್ಲ ಬೆಂಗಳೂರಿನ ಸುಂದರತೆ ಕೂಡ ನಾಶವಾಗಿದೆ..ಮಳೆಯಿಂದಾಗಿ  ರಸ್ತೆ ಬದಿಯಲ್ಲಿರುವ ವಿದ್ಯುತ್ ದೀಪದ ಕಂಬಗಳು ಕೂಡ  ನೆಲಕಚ್ಚಿದ್ದು, ಬೆಸ್ಕಾಂ ಗೆ ದೂರುಗಳ ಸುರಿಮಳೆಯೇ  ಹರಿದುಬಂದಿದೆ.
 
ಬೆಸ್ಕಾಂ ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಿಂದ ಸುರಿದ ಭಾರಿ ಗಾಳಿ-ಮಳೆಗೆ 546 ವಿದ್ಯುತ್ ಕಂಬಗಳು ಧರೆಗುರುಳಿವೆ.ದುರಸ್ಥಿ ಕಾರ್ಯ ಭರದಿಂದ ಸಾಗಿದ್ದು, ಹಾನಿಯ ಅಂದಾಜು ಮಾಡಲಾಗುತ್ತಿದೆ. ಭಾರೀ ಮಳೆ-ಗಾಳಿಗೆ ವಿದ್ಯುತ್ ಮೂಲಸೌಕರ್ಯಗಳು ಹಾನಿಗೊಂಡಿದ್ದು, ವಿದ್ಯುತ್ ವ್ಯತ್ಯಯ ಉಂಟಾಗಿರುವ ಪ್ರದೇಶಗಳಲ್ಲಿ ವಿದ್ಯುತ್ ಮರು ಸ್ಥಾಪನೆಗೆ ಕ್ರಮ ವಹಿಸಲಾಗಿದೆ.ಶನಿವಾರ ಬೆಂಗಳೂರು ನಗರ ಸೇರಿ ಬೆಸ್ಕಾಂ ವ್ಯಾಪ್ತಿಯ ಹಲವು ಭಾಗಗಳಲ್ಲಿ 142 ಕಂಬಗಳು ಮುರಿದ್ದಿದ್ದು ಹಾಗು 20 ಟಿಸಿಗಳು ಹಾನಿಗೊಳಗಾಗಿವೆ. ಹಾಗೆಯೇ ಭಾನುವಾರ 404 ಕಂಬಗಳು ಮುರಿದ್ದಿದ್ದು, 44 ಟಿಸಿಗಳು ಹಾಗೂ 9 ಡಬಲ್ ಪೋಲ್ ಸ್ಟ್ರಕ್ಚರ್ ಗಳು ಹಾನಿಗೊಳಗಾಗಿವೆ.
 
 ಬೆಸ್ಕಾಂ ಅಭಿಯಂತರರು ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿದ್ದು, ದುರಸ್ಥಿ ಕಾರ್ಯದಲ್ಲಿ ತೊಡಗಿದ್ದಾರೆ. ಕೆಲ ಪ್ರದೇಶದಲ್ಲಿ ಭಾರೀ ಗಾಳಿಗೆ ಮರಗಳು ವಿದ್ಯುತ್ ತಂತಿ ಮೇಲೆ ಬಿದ್ದಿದ್ದು, ಅವುಗಳ ತೆರವು ಕಾರ್ಯ ಮಾಡಲಾಗಿದೆ . ಆದರೇ ಕೆಲವು ಕಡೆ ಮರ ಮರಗಳ ಕೆಳಗೆ ವಿದ್ಯುತ್ ಕಂಬಗಳು ಬಿದ್ದಿದ್ದು ಅದನ್ನು ಸಂಬಂಧಪಟ್ಟ ಅಧಿಕಾರಿಗಳು ತರುವ ಮಾಡಕ್ಕೆ ಮುಂದಾಗುವವರೆಗೂ ನಾವು ಅದನ್ನು ತೆರವು ಮಾಡಲು ಸಾಧ್ಯವಿಲ್ಲ. ಶನಿವಾರದಿಂದ ಒಟ್ಟು 44,784 ಕರೆಗಳು ಬೆಸ್ಕಾಂ ಸಹಾಯವಾಣಿ 1912 ಕ್ಕೆ ಬಂದಿದ್ದು, ಈ ಪೈಕಿ 22,249 ದೂರುಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಹಾಗೂ ಪ್ರತಿ ಒಂದು ಗಂಟೆಗೆ ಸುಮಾರು 779 ದೂರುಗಳು ದಾಖಲಾಗಿವೆ ಹಾಗಯೇ ಪ್ರತಿ ಒಂದು ಗಂಟೆಗೆ 1691 ಫೂನ್ ಕರೆಗಳೂ  ಬೆಸ್ಕಾಂ ಗೆ ಬಂದಿವೆ, ಹಾಗೂ ಇಷ್ಟೆಲಾ ದೂರುಗಳು ಬಂದರು ಸಹ ಬೆಸ್ಕಾಂ ತಕ್ಷಣವೇ ಸ್ಪಂದೀಸಿ ಸಮಸ್ಯ ಪರಿಹರಿಸಿದೆ,  ಹಾಗೂ ಒಟ್ಟು ಮೂರು ದಿನಗಳಲ್ಲಿ ಆಗಿರುವ ಒಟ್ಟು ಹಾನಿ 1ಕೋಟಿ 40 ಲಕ್ಷ ರೂಪಾಯಿ ಅಷ್ಟು ಬೆಸ್ಕಾಂಗೆ ನಷ್ಟವಾಗಿದೆ ಎಂದು ಬೆಸ್ಕಾಂ ಮೂಲಗಳು ಹೇಳೀವೆ, ಒಟ್ಟಾರೆ ಎರಡೇ ದಿನದ ಬಾರಿ ಮಳೆಗೆ ಸಾಕಷ್ಟು ಅನಾಹುತಗಳು ಆಗಿದ್ದು ..ಇನ್ನೂ ಮೂರ್ನಾಲ್ಕು ದಿನಗಳ ಕಾಲ ಮಳೆ ಬರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ