ಬೆಂಗಳೂರಿನಲ್ಲಿ ಮಳೆಗಿಂತ ಗಾಳಿಯ ದರ್ಬಾರು, ಲೇಟೆಸ್ಟ್ ಹವಾಮಾನ ವರದಿ ಹೀಗಿದೆ

Krishnaveni K

ಗುರುವಾರ, 22 ಆಗಸ್ಟ್ 2024 (11:00 IST)
ಬೆಂಗಳೂರು: ಕರ್ನಾಟಕದಲ್ಲಿ ಕಳೆದ ಒಂದು ವಾರದಿಂದ ಅಲ್ಲಲ್ಲಿ ಸಾಧಾರಣ ಮಳೆಯಾಗುತ್ತಿದೆ. ದಕ್ಷಿಣ ಕನ್ನಡ, ಬೆಂಗಳೂರು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್ ಘೋಷಣೆಯಾಗಿದೆ. ಲೇಟೆಸ್ಟ್ ಹವಾಮಾನ ವರದಿ ಇಲ್ಲಿದೆ.

ಕರ್ನಾಟಕದಲ್ಲಿ ಆಗಸ್ಟ್ 27 ರವರೆಗೆ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ವರದಿ ನೀಡಿದೆ. ಹೆಚ್ಚಿನ ಭಾಗಗಳಲ್ಲಿ ಬೆಳಿಗ್ಗೆ ಮೋಡ ಕವಿದ ವಾತಾವರಣವಿದ್ದು ಸಂಜೆ ಮಳೆಯಾಗುತ್ತಿದೆ. ರಾಜ್ಯ ರಾಜಧಾನಿಯಲ್ಲಿ ನಿನ್ನೆ ಮಳೆಯಿರದೇ ಇದ್ದರೂ ಭಾರೀ ಗಾಳಿ ಬಿಸುತ್ತಿದೆ ಮತ್ತು ಮೋಡ ಕವಿದ ವಾತಾವರಣವಿದೆ.

ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ ಮುಂತಾದೆಡೆ ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ.  ಕಳೆದ ಒಂದು ವಾರದಿಂದ ಸಂಜೆ ಮಳೆಯಾಗುತ್ತಿದ್ದ ಬೆಂಗಳೂರಿನಲ್ಲಿ ಈಗ ಭಾರೀ ಗಾಳಿ ಬೀಸುತ್ತಿದ್ದು ಶೈತ್ಯ ಹವೆ ಮುಂದುವರಿದಿದೆ. ಇಂದು ಗರಿಷ್ಠ ಉಷ್ಣಾಂಶ 28 ಡಿಗ್ರಿ ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿಯವರೆಗಿದೆ.

ಮಳೆಯ ಪ್ರಮಾಣ ಕಡಿಮೆಯಾದ ಬೆನ್ನಲ್ಲೇ ಕರ್ನಾಟಕದಾದ್ಯಂತ ತಾಪಮಾನ ಭಾರೀ ಏರಿಕೆಯಾಗಿದೆ. ಹಗಲು ವಿಪರೀತ ಬಿಸಿಯ ವಾತಾವರಣವಿದ್ದು, ಮಳೆಯ ನಡುವೆಯೂ ತಾಪಮಾನ ಏರಿಕೆ ಅಚ್ಚರಿಗೆ ಕಾರಣವಾಗಿದೆ. ಕೆಲವೆಡೆ ಇಂದು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ