ಜಾಮಿಯಾ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆಗೆ ಅಡ್ಡಿಪಡಿಸಿ, ಹಾಜರಾದವರನ್ನು ಪ್ರಚೋದಿಸುವ ಮೂಲಕ ಕಾನೂನು ಮತ್ತು ಸುವ್ಯವಸ್ಥೆಯನ್ನು ಹಾಳು ಮಾಡಲು ಪಾಕಿಸ್ಥಾನಿ ಭಯೋತ್ಪಾದಕ ಸಂಘಟನೆಗಳ ನಿರ್ವಾಹಕರಿಂದ ಉತ್ತಮ ಯೋಜಿತ ಸಂಚಿನ ಭಾಗವಾಗಿದೆ ಎಂಬುದು ಪ್ರಾಥಮಿಕ ತನಿಖೆಯ ವೇಳೆ ತಿಳಿದುಬಂದಿದೆ' ಎಂದು ಪೊಲೀಸ್ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಭದ್ರತಾ ಪರಿಸ್ಥಿತಿಯನ್ನು ಕಾಪಾಡುವ ಬಗ್ಗೆ ಭದ್ರತೆ ಮತ್ತು ಅರೆಸೇನಾ ಪಡೆಗಳು ಜಾಗರೂಕವಾಗಿವೆ. ಯಾವುದೇ ಧರ್ಮದ ದೇಗುಲ, ಚರ್ಚ್, ಮಸೀದಿ, ಮಂದಿರ ಅಥವಾ ಗುರುದ್ವಾರವಾಗಿರಲಿ ಸುರಕ್ಷಿತವಾಗಿರಬೇಕು ಎಂದು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಬಾರಾಮುಲ್ಲಾ ಜಿಲ್ಲೆಯ ಪಟ್ಟನ್‌ನಲ್ಲಿ ಹೇಳಿಕೆ ನೀಡಿದ್ದಾರೆ