ಕಂಠೀರವ ಕ್ರೀಡಾಂಗಣದಲ್ಲಿ ಹೆಚ್ಚಿನ ಅಭಿಮಾನಿಗಳು ಜಮಾವಣೆ

ಶುಕ್ರವಾರ, 29 ಅಕ್ಟೋಬರ್ 2021 (22:02 IST)
ಬೆಂಗಳೂರು: ಕಂಠೀರವ ಕ್ರೀಡಾಂಗಣದಲ್ಲಿ ಹೆಚ್ಚಿನ ಅಭಿಮಾನಿಗಳು ಜಮಾವಣೆಗೊಂಡಿದ್ದು, ಪರಿಸ್ಥಿತಿ ಪೊಲೀಸ್ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಆದ್ದರಿಂದ ಹೆಚ್ಚಿನ ಪೊಲೀಸ್ ವ್ಯವಸ್ಥೆ ಬಳಸಿಕೊಳ್ಳಲು ನಗರ ಪೊಲೀಸರು ಮುಂದಾಗಿದ್ದಾರೆ.
ಶುಕ್ರವಾರ ಸಂಜೆ 6.30 ಕ್ಕೆ ನಟ ಪುನೀತ್ ರಾಜ್‍ಕುಮಾರ್ ಅವರ ಪಾರ್ಥಿವ ಶರೀರ ತರಲಾಗಿತ್ತು. ಲಕ್ಷಾಂತರ ಅಭಿಮಾನಿಗಳು ಜಮಾವಣೆಯಾಗಿದ್ದು, ನೂಕು ನುಗ್ಗಲು ಉಂಟಾಯಿತು. ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ನಗರದ ವಿವಿಧ ಠಾಣೆಗಳಿಂದ ಪೊಲೀಸರನ್ನು ಕರೆಸಲಾಯಿತು.
ಹೋಂ ಗಾಡ್ಸ್ ಬಳಕೆಗೆ ತೀರ್ಮಾನ: ನೂಕು ನುಗ್ಗಲು, ಪೊಲೀಸರ ಮೇಲಿನ ಒತ್ತಡ ಕಡಿಮೆ ಮಾಡಲು ಹೋಂ ಗಾಡ್ಸ್ ಗಳನ್ನು ಬಳಸಿಕೊಳ್ಳಲು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತೀರ್ಮಾನಿಸಿದ್ದರು. ಶನಿವಾರ ಬೆಳಗ್ಗೆ ಸಾವಿರಾರು ಹೋಂ ಗಾಡ್ಸ್ ಗಳು ಭದ್ರತೆಗೆ ನಿಯೋಜನೆ ಗೊಳ್ಳಲಿದ್ದಾರೆ.

ಪರಿಸ್ಥಿತಿ ನಿಯಂತ್ರಿಸಲು ಲಾಠಿ ಚಾಚ್೯:
ನಟ ಪುನೀತ್ ರಾಜ್‍ಕುಮಾರ್ ಪಾರ್ಥಿವ ಶರೀರವು ಕಂಠೀರವ ಕ್ರೀಡಾಂಗಣದಲ್ಲಿ ಇಡಲಾಗಿದ್ದು, ಅಂತಿಮ ದರ್ಶನ ಪಡೆಯಲು ಅಭಿಮಾನಿಗಳು ಒಟ್ಟಿಗೆ ಗೇಟ್ ಬಳಿ ಬಂದಿದ್ದರಿಂದ ನೂಕು ನುಗ್ಗಲು ಉಂಟಾಯಿತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿಚಾಜ್೯ ಮಾಡಲಾಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ