ಸಾರ್ವಜನಿಕ ಶೌಚಾಲಯ ನಿರ್ಮಾಣದಲ್ಲಿ ಸರ್ಕಾರಿ ಅಧಿಕಾರಿಗಳ ಯಡವಟ್ಟು

ಗುರುವಾರ, 8 ಸೆಪ್ಟಂಬರ್ 2022 (14:33 IST)
ಸ್ವಚ್ಛ ಭಾರತ್ ಎಂದು ಇಡೀ ದೇಶದೆಲ್ಲೆಡೆ ಶೌಚಾಲಯಗಳನ್ನು ನಿರ್ಮಿಸಿ  ಸ್ವಚ್ಛತೆಯ  ಬಗ್ಗೆ ಯೋಜನೆಗಳನ್ನು ರೂಪಿಸುತ್ತಿದ್ದಾರೆ , ಆದರೆ ತಮಿಳುನಾಡಿನ ಕಾರ್ಪೋರೇಷನ್ ಮಾತ್ರ ಎಡವಟ್ಟನ್ನ ಮಾಡಿಕೊಂಡಿದೆ 
 
ಸ್ಥಳೀಯ ಕಾರ್ಪೋರೇಷನ್ ನಿರ್ಮಾಣ ಮಾಡಿದ ಸಾರ್ವಜನಿಕ ಶೌಚಾಲಯ ದಲ್ಲಿ ಒಂದೇ ಬಾತ್ ರೂಮಿನಲ್ಲಿ ಎರಡೂ ಕಮೋಡ್ ಕೂರಿಸುವ ಮೂಲಕ ದೊಡ್ಡ ಎಡವಟ್ಟಿಗೆ ಕಾರಣವಾಗಿದೆ , ವಿಚಿತ್ರವೇನೆಂದರೆ ಈ ಬಾತ್ ರೂಮಿಗೆ ಬಾಗಿಲು ಕೂಡ ಹಾಕಿಲ್ಲ .
 
ಪಾಲಿಕೆಯ ಇಂತಹ ಕಾಮಗಾರಿಯಿಂದ ಸಿಟ್ಟಾಗಿರುವ ಸಾರ್ವಜನಿಕರು, ಪಾಲಿಕೆ ವ್ಯಾಪ್ತಿಯ ಇತರ ಭಾಗಗಳಲ್ಲೂ ಇದೇ ತರಹದ ಶೌಚಾಲಯ ನಿರ್ಮಾಣ ಮಾಡಲಾಗಿದೆಯೇ ಎಂದು ಪ್ರಶ್ನಿಸಿದ್ದಾರೆ. ಇನ್ನಾದರೂ ಪಾಲಿಕೆ ಆಯುಕ್ತರು ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ