ಅಮ್ಮಂದಿರ ದಿನ, ಭೂಮಿ ಮೇಲಿನ ದೇವತೆಗೆ ಕೋಟಿ ನಮನಗಳು

Sampriya

ಭಾನುವಾರ, 12 ಮೇ 2024 (09:57 IST)
ಈ ಜಗತ್ತಿನಲ್ಲಿ ತನ್ನ ಜೀವಕ್ಕಿಂತ ಇನ್ನೊಂದು ಜೀವಿಯನ್ನು ಪ್ರೀತಿಸುವ ವ್ಯಕ್ತಿಯೆಂದರೆ ಅದು ತಾಯಿ. ಮೇ 12ರಂದು ಅಂದರೆ ಇಂದು ವಿಶ್ವ ಅಮ್ಮಂದಿರ ದಿನವನ್ನು ಆಚರಿಸಲಾಗುತ್ತದೆ. ಇದು ಎಲ್ಲರ ಪಾಲಿನ ಮಹತ್ವದ ದಿನ ಕೂಡಾ ಹೌದು. ವರ್ಷಗಳಿಂದ ತಾಯಂದಿರು ನಮಗಾಗಿ ಮಾಡಿದ ಎಲ್ಲಾ ತ್ಯಾಗಗಳಿಗೆ ನಾವು ಕೃತಜ್ಞತೆಯನ್ನು ತೋರಿಸುವ ದಿನವಾಗಿದೆ.

ಉಸಿರು ನೀಡಿದ ದೇವರು, ದಾರಿ ತೋರಿಸಿದ ಗುರು ಅಮ್ಮನಿಗೆ ಇಂದು ಸೆಷ್ಪಲ್ ಆಗಿ ವಿಶ್ ಮಾಡಲು ಮೀಸಲಿಟ್ಟ ದಿನವಿದು. ಆದರೆ ಅಮ್ಮಂದಿರ ದಿನ ಕೇವಲ ಒಂದೇ ದಿನಕ್ಕೆ ಸೀಮಿತವಾಗದೆ ಪ್ರತಿ ದಿನವೂ ಜೀವಕೊಟ್ಟ ಹೆತ್ತಮ್ಮನನ್ನು ಖುಷಿಯಾಗಿರುವುದು ಮಕ್ಕಳ ಕರ್ತವ್ಯ.  ಮಗುವಿನ ಲಾಲನೆ ಪೋಷಣೆಯಲ್ಲಿ ವರ್ಷಪೂರ್ತಿ ಕಳೆಯುವ ಹೆತ್ತಮ್ಮನಿಗೆ ಇಂದು ಒಂದು ದಿನ ಮಾತ್ರ ಆಕೆಯ ದಿನವನ್ನಾಗಿ ಆಚರಿಸುತ್ತಾರೆ.

ಪ್ರತಿ ತಾಯಿಯು ವಿಶೇಷ ಮತ್ತು ವರ್ಷವಿಡೀ ಮೆಚ್ಚುಗೆಗೆ ಅರ್ಹರು. ಅವರು ಪ್ರತಿದಿನ ತಮ್ಮ ಮಕ್ಕಳಿಗಾಗಿ ಅಪಾರ ಪ್ರಮಾಣದ ಪ್ರಯತ್ನ, ಪ್ರೀತಿ ಮತ್ತು ಕಾಳಜಿಯನ್ನು ಹಾಕುತ್ತಾರೆ. ಬೆಳಗ್ಗೆಯಿಂದಲೇ ರಾತ್ರಿ ಮಲಗುವರೆಗೂ ತನ್ನವರ ಯೋಚನೆಯಲ್ಲಿರುವ ಜೀವಿಗೆ ಇಂದು ಶುಭಕೋರಿ ಆಕೆಯನ್ನು ಸೆಲೆಬ್ರೇಟ್ ಮಾಡಿ ಪ್ರತಿ ದಿನವು ಆಕೆಯನ್ನು ಖುಷಿಯಿಂದ ಇರಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ.



 
Photo Courtesy X

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ