ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸುತ್ತಿರುವ ಬಾಯಿ ಹುಣ್ಣು..!

ಶನಿವಾರ, 6 ಆಗಸ್ಟ್ 2022 (19:27 IST)
ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಮತ್ತು ವಾತವರಣದಲ್ಲಿ ಬದಲಾವಣೆಯಿಂದಾಗಿ 10 ದಿನಗಳಿಂದ ಎಲ್ಲೆಡೆ ಕೆಮ್ಮು, ನೆಗಡಿ, ಶೀತದ ಜತೆಗೆ ಮಕ್ಕಳಲ್ಲಿ ಕೈ, ಕಾಲು ಮತ್ತು ಬಾಯಿ ಹುಣ್ಣುಗಳು ಕಾಣಿಸಿಕೊಳ್ಳುತ್ತಿದೆ.
 
 ಶಾಲೆಗಳಲ್ಲಿ ಒಬ್ಬರಿಂದ ಒಬ್ಬರಿಗೆ ಬಾಯಿಹುಣ್ಣು ತೀವ್ರವಾಗಿ ಹರಡುತ್ತಿರುವುದು ಕಂಡುಬಂದಿದೆ. ಕೊರೊನಾದಿಂದಾಗಿ ಎರಡು ವರ್ಷಗಳ ಕಾಲ ಮನೆಯಲ್ಲಿದ್ದ ಮಕ್ಕಳು ಶಾಲೆಗಳಿಗೆ ಹೋಗುತ್ತಿದ್ದಾರೆ. ಆದರೀಗ ವಾತಾವರಣ ಬದಲಾವಣೆಯಿಂದಾಗಿ ಕೈ, ಬಾಯಿ ಮತ್ತು ಕಾಲು ಹುಣ್ಣಿನ ಕಾರಣಕ್ಕೆ ಬಹುತೇಕ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ಸಾಲುಗಟ್ಟಿರುವುದು ಸಾಮಾನ್ಯವಾಗಿದೆ. ಕಾಕ್ಸಾಕಿ ವೈರಸ್ನಿಂದ ಮಕ್ಕಳಲ್ಲಿ ಕೈಕಾಲು, ಬಾಯಿ ಹುಣ್ಣು ಕಾಣಿಸಿಕೊಂಡ ಪರಿಣಾಮ ತೀವ್ರವಾಗಿರುವುದಿಲ್ಲ. ಹಾಗಾಗಿ ಇದಕ್ಕೆ ಈವರೆಗೂ ಯಾವುದೇ ಲಸಿಕೆ ಲಭ್ಯವಿಲ್ಲ. ಇದು 10 ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚು ಕಂಡುಬರುತ್ತಿದೆ ಎಂದು ವೈದ್ಯರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ