ಸಾರಿ ಕೇಳಿದ ಸಂಸದ ಪ್ರತಾಪ್ ಸಿಂಹ
ಮೈಸೂರು ಎಕ್ಸ್ಪ್ರೆಸ್ ವೇ ಬೈಪಾಸ್ ಓಪನ್ ತಡವಾಗಿದ್ದಕ್ಕೆ ಸಂಸದ ಪ್ರತಾಪ್ ಸಿಂಹ ಕ್ಷಮೆ ಕೋರಿದ್ದಾರೆ. ನವೆಂಬರ್ ಅಂತ್ಯದ ವೇಳೆ ಮದ್ದೂರು ಬೈಪಾಸ್ ಓಪನ್ ಆಗುತ್ತೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ರು. ಫೇಸ್ ಬುಕ್ ಲೈವ್ ಮೂಲಕ ದಶಪಥ ಹೆದ್ದಾರಿ ಬಗ್ಗೆ ಪ್ರತಾಪ್ ಸಿಂಹ ಮಾಹಿತಿ ನೀಡಿದ್ದಾರೆ. ಆದರೆ ಅದು ಐದಾರು ದಿನ ತಡವಾಗಿದೆ. ಮಳೆಯಿಂದ ಬೈಪಾಸ್ ಕಾಮಗಾರಿ ತಡವಾಗಿದೆ. ಇದೀಗ ಎಕ್ಸ್ಪ್ಯಾನ್ಷನ್ ಜಾಯಿಂಟ್ ಕೆಲಸ ಮುಕ್ತಾಯವಾಗಿದೆ. ಸೇಫ್ಟಿ ಆಡಿಟಿಂಗ್, ಲೋಡ್ ಟೆಸ್ಟಿಂಗ್, ಮಾರ್ಕಿಂಗ್ ಕೂಡ ಮುಗಿದಿದೆ. ಒಂದೆರಡು ದಿನದಲ್ಲೆ ಮದ್ದೂರು ಬೈಪಾಸ್ ಸಂಚಾರಕ್ಕೆ ಮುಕ್ತವಾಗಲಿದೆ. ಫ್ಲೈ ಓವರ್ ಸಂಚಾರಕ್ಕೆ ಮುಕ್ತವಾದ್ರೆ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಸಂಚರಿಸುವವರಿಗೆ ಕನಿಷ್ಠ 15ರಿಂದ 20 ನಿಮಿಷ ಉಳಿತಾಯವಾಗುತ್ತೆ. ಕೆಲವೇ ದಿನಗಳಲ್ಲಿ ಶ್ರೀರಂಗಪಟ್ಟಣ ಬೈಪಾಸ್ ಕೂಡ ಓಪನ್ ಆಗಲಿದೆ ಎಂದು ಅವರು ತಿಳಿಸಿದರು. ಹನಕರೆ, ಯಲಿಯೂರು, ಇಂಡವಾಳು ಸೇರಿದಂತೆ ಹಲವೆಡೆ ಅಂಡರ್ ಪಾಸ್ ಕಾಮಗಾರಿ ಆಗಬೇಕಿದೆ. ಮೈಸೂರು-ಬೆಂಗಳೂರು ದಶಪಥ ರಸ್ತೆ ಕಾಮಗಾರಿ ಪೂರ್ಣವಾಗಲು ಇನ್ನು ಎರಡು ತಿಂಗಳು ಬೇಕಾಗುತ್ತದೆ ಎಂದರು. ಮದ್ದೂರು ಪ್ಲೈ ಓವರ್ ಮೇಲೆ ಸಂಚರಿಸಿ ಸಂಸದರು ಮಾಹಿತಿ ನೀಡಿದ್ದಾರೆ.