ಎಂಟಿಬಿ ನಾಗರಾಜ್ ರಾಜೀನಾಮೆ ಹಿಂದಿದೆಯಂತೆ ಬಿಜೆಪಿ ತಂತ್ರ

ಶನಿವಾರ, 13 ಜುಲೈ 2019 (13:14 IST)
ಬೆಂಗಳೂರು : ಸಚಿವ ಎಂಟಿಬಿ ನಾಗರಾಜ್ ರಾಜೀನಾಮೆ ನೀಡಿರುವುದರ ಹಿಂದೆ ಬಿಜೆಪಿಯ ಮಾಸ್ಟರ್ ಪ್ಲ್ಯಾನ್ ಇದೆ ಎಂಬುದಾಗಿ ತಿಳಿದುಬಂದಿದೆ.ಹೌದು. ಹೊಸಕೋಟೆ ಕ್ಷೇತ್ರದಿಂದ ಎಂಟಿಬಿ ನಾಗರಾಜ್ ಪುತ್ರ ನಿತೀಶ್ ಪುರುಷೋತ್ತಮ್ ಗೆ ಯಾವುದೇ ಪ್ರಬಲ ಎದುರಾಳಿ ಇಲ್ಲದೇ  ಟಿಕೆಟ್ ನೀಡುವುದಾಗಿ ಈಗಾಗಲೇ ಬಿಜೆಪಿಯಿಂದ ಆಫರ್ ಸಿಕ್ಕಿದ್ದು, ಮಗನ ರಾಜಕೀಯ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಲು ಎಂಟಿಬಿ ನಾಗರಾಜ್ ಅವರು ಬಿಜೆಪಿಯ  ಆಫರ್ ಮೇರೆಗೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ.


ಹಾಗೇ ಹೊಸಕೋಟೆಯಲ್ಲಿ ತಮ್ಮ ಎದುರಾಳಿ ಬಚ್ಚೇಗೌಡರ ಮನವೊಲಿಕೆ ಮಾಡಿರುವ ಬಿಜೆಪಿ, ಬಚ್ಚೇಗೌಡರ ಪುತ್ರ ಶರತ್ ಗೆ ಮುಂದಿನ ಚುನಾವಣೆಯಲ್ಲಿ ಬಾಗೇಪಲ್ಲಿಯಿಂದ ಕಣಕ್ಕೀಳಿಯಲು ಬಿಜೆಪಿ ಟಿಕಟ್ ನೀಡುವುದಾಗಿ ಬಿಜೆಪಿ ತಿಳಿಸಿದೆ ಎನ್ನಲಾಗಿದೆ. ಈ ಇಬ್ಬರು ನಾಯಕರ ಮಕ್ಕಳಿಗೆ ಎರಡು ಕಡೆ ಟಿಕೆಟ್ ಆಫರ್ ಸಿಕ್ಕ ಹಿನ್ನಲೆಯಲ್ಲಿ  ಎಂಟಿಬಿ ನಾಗರಾಜ್ ರಾಜೀನಾಮೆ ನೀಡಿ ಪಕ್ಷ ಬಿಡಲು ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.


 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ