ಮುಡಾ ಭ್ರಷ್ಟಾಚಾರ ಮತ್ತೆ ಬಯಲು: 50:50 ಸೈಟು ಅನುಪಾತ ರದ್ದತಿ ನಿರ್ಧಾರದ ಬೆನ್ನಲ್ಲೇ ಕಡತಗಳೇ ನಾಪತ್ತೆ

Krishnaveni K

ಶನಿವಾರ, 9 ನವೆಂಬರ್ 2024 (10:40 IST)
ಮೈಸೂರು: ಮುಡಾದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ ಎಂಬುದಕ್ಕೆ ಮತ್ತೊಂದು ನಿದರ್ಶನ ಸಿಕ್ಕಿದೆ. ಮುಡಾದಲ್ಲಿ 50:50 ಅನುಪಾತದಲ್ಲಿ ಸೈಟು ಹಂಚಿಕೆ ನಿಯಮ ವಾಪಸ್ ಪಡೆಯಲು ನಿರ್ಧರಿಸಿದ ಬೆನ್ನಲ್ಲೇ ಕಡತಗಳೇ ನಾಪತ್ತೆಯಾಗಿದೆ.

ಮೊನ್ನೆಯಷ್ಟೇ ಸಭೆ ನಡೆಸಿದ್ದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮಂಡಳಿ ವಿವಾದಗಳ ಹಿನ್ನಲೆಯಲ್ಲಿ 50:50 ಅನುಪಾತದಲ್ಲಿ ನೀಡಲಾಗಿದ್ದ ಸೈಟುಗಳನ್ನೇ ಹಿಂಪಡೆಯಲು ನಿರ್ಧಾರ ಮಾಡಿತ್ತು. ಆದರೆ ಈಗ 50:50 ಅನುಪಾತದಲ್ಲಿ ನೀಡಲಾಗಿದ್ದ ಸೈಟುಗಳಿಗೆ ಸಂಬಂಧಿಸಿದ ಕಡತಗಳೇ ನಾಪತ್ತೆಯಾಗಿರುವ ಅಂಶ ಬೆಳಕಿಗೆ ಬಂದಿದೆ.

ಮುಡಾ ಸಭೆಯಲ್ಲೇ ಕೆಲವು ಅಧಿಕಾರಿಗಳು ಈ ಬಗ್ಗೆ ಅಸಹಾಯಕತೆ ತೋಡಿಕೊಂಡಿದ್ದಾರೆ ಎನ್ನಲಾಗಿದೆ. ಹಿಂದಿನ ಆಯುಕ್ತರು, ಅಧಿಕಾರಿಗಳು ಕಡತಗಳನ್ನೇ ನಾಶಪಡಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಅಧಿಕಾರಿಗಳು ಹೇಳಿದ ಮಾತಿಗೆ ಜನಪ್ರತಿನಿಧಿಗಳೇ ಬೆಚ್ಚಿಬಿದ್ದಿದ್ದಾರೆ.

ಈಗಾಗಲೇ 50:50 ಅನುಪಾತದಲ್ಲಿ ಸೈಟು ಪಡೆದುಕೊಂಡವರಿಗೆ ಎಲ್ಲಿ ತಮ್ಮ ಸೈಟು ಕಳೆದುಹೋಗುತ್ತದೋ ಎಂಬ ಟೆನ್ಷನ್ ಶುರುವಾಗಿದೆ. ಇದೀಗ ಕಡತಗಳು ನಾಪತ್ತೆಯಾಗಿರುವ ವಿಚಾರ ಕೇಳಿದರೆ ಮುಡಾದಲ್ಲಿ ಎಷ್ಟರಮಟ್ಟಿಗೆ ಭ್ರಷ್ಟಾಚಾರ ನಡೆದಿರಬಹುದು ಎಂಬುದು ಕನ್ ಫರ್ಮ್ ಆಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ