ಮುಗಿಯದ ಮುಂಬೈ ಕಾಟ : ಕೊರೊನಾ ಕೇಸ್ ಮತ್ತೆ ಹೆಚ್ಚಳ
ಮುಂಬೈ ಹಾಗೂ ಮಹಾರಾಷ್ಟ್ರದಿಂದ ಬಂದವರಲ್ಲಿ ಕೊರೊನಾ ವೈರಸ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ.
ಸೋಂಕು ಹರಡಿದ ಮೂಲಗಳನ್ನು ಪತ್ತೆ ಹಚ್ಚಲಾಗುತ್ತಿದೆ. ಇದರೊಂದಿಗೆ ಕಲಬುರಗಿಯಲ್ಲಿ ಇದುವರೆಗೂ 1560 ಕೊರೊನಾ ಪಾಸಿಟಿವ್ ಕೇಸ್ ಗಳು ಕಂಡುಬಂದಂತೆ ಆಗಿವೆ.
1143 ಜನರು ಚಿಕಿತ್ಸೆ ಪಡೆದು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರೆ, ಡೆಡ್ಲಿ ಕೊರೊನಾಕ್ಕೆ 22 ಜನರು ಸಾವನ್ನಪ್ಪಿದ್ದಾರೆ. 395 ಸಕ್ರಿಯ ರೋಗಿಗಳಿಗೆ ಚಿಕಿತ್ಸೆ ಮುಂದುವರಿದಿದೆ.