ಜುಲೈ, ಆಗಸ್ಟ್ ನಲ್ಲಿ ಕೊರೊನಾ ಕೇಸ್ ಹೆಚ್ಚಾಗುತ್ತೆ ಎಂದ ಡಿಸಿ

ಶುಕ್ರವಾರ, 3 ಜುಲೈ 2020 (20:02 IST)
ಕೊರೊನಾ ಸೋಂಕು ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಜಾಸ್ತಿಯಾಗುವ ಸಾಧ್ಯತೆ ಇದೆ.

ಸಾರ್ವಜನಿಕರು ಸಾಮಾಜಿಕ ಜವಾಬ್ದಾರಿಯಾಗಿ ನಡೆದುಕೊಳ್ಳಬೇಕು. ಹೀಗಂತ ಮದ್ದೂರಿನಲ್ಲಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಹೇಳಿದ್ದಾರೆ.

ಮದ್ದೂರಿನಲ್ಲಿ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿರುವ ಹಿನ್ನಲೆ ಕಂಟೋನ್ಮೆಂಟ್ ಝೋನ್ ಪ್ರದೇಶಕ್ಕೆ ಭೇಟಿ ನೀಡಿದ್ದೇನೆ.

ಜುಲೈ ವರೆಗೂ ಮದ್ದೂರಿನಲ್ಲಿ ಯಾವುದೇ ಪ್ರಕರಣಗಳಿರಲ್ಲಿಲ್ಲಾ. ಲಾಕ್ ಡೌನ್ ಸಡಿಲಿಕೆಯಾದ ಮೇಲೆ ಬೆಂಗಳೂರಿನಿಂದ ಜಾಸ್ತಿ ಜನ ಬಂದು ಹೋಗುತ್ತಿದ್ದಾರೆ. ಹೀಗಾಗಿ ಪಾಸಿಟಿವ್ ಕೇಸ್ ಗಳು ದಾಖಲಾಗುತ್ತಿವೆ ಎಂದಿದ್ದಾರೆ.

ಕುಟುಂಬದಲ್ಲಿ ಯಾರಿಗಾದರು ನೆಗಡಿ, ಕೆಮ್ಮು, ಜ್ವರ ಕಂಡುಬಂದರೆ ಪರೀಕ್ಷೆ ಮಾಡಿಸಿಕೊಳ್ಳಿ, ಅನುಮಾನಾಸ್ಪದವಾಗಿ ಕಂಡುಬಂದರೆ ಮಾಹಿತಿ ನೀಡಿ ಎಂದಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ