ಸಿಎಎ ವಿರೋಧಿಗಳಿಗೆ ಪಾಕ್ ಕುಮ್ಮಕ್ಕಿದೆ- ಸಂಸದ ಎಸ್.ಮುನಿಸ್ವಾಮಿ

ಶುಕ್ರವಾರ, 21 ಫೆಬ್ರವರಿ 2020 (09:51 IST)
ಕೋಲಾರ : ಪಾಕ್ ಪರ ಅಮೂಲ್ಯ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕ್ ಪರ ಘೋಷಣೆ ಕೂಗಿದ್ದ ಅಮೂಲ್ಯಳನ್ನು ಸೆರೆಮನೆಯಲ್ಲಿಟ್ಟು ಸೂಕ್ತ ಶಿಕ್ಷೆ ವಿಧಿಸಬೇಕು ಎಂದು ಬಿಜೆಪಿ ಸಂಸದ ಎಸ್.ಮುನಿಸ್ವಾಮಿ ಹೇಳಿದ್ದಾರೆ.


ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕ್ ಪರ ಘೋಷಣೆ ಕೂಗಿದ್ದ ಅಮೂಲ್ಯಗೆ ತಿಳಿವಳಿಕೆ ಇಲ್ಲ.  ಅಮೂಲ್ಯ ಹಿಂದಿರುವ ಏಜೆಂಟ್ ಗಳನ್ನು ಮೊದಲು ಪತ್ತೆ ಮಾಡಬೇಕು ಎಂದು ಹೇಳಿದ್ದಾರೆ.


ತಂದೆ ತಾಯಿಗೆ ಬೇಡವಾದ ಅವಳು, ನಮ್ಮ ದೇಶಕ್ಕೂ ಬೇಡ. ಅಮೂಲ್ಯಳನ್ನು ಸೆರೆಮನೆಯಲ್ಲಿಟ್ಟು ಸೂಕ್ತ ಶಿಕ್ಷೆ ವಿಧಿಸಬೇಕು. ಸಿಎಎ ವಿರೋಧಿಗಳಿಗೆ ಪಾಕ್ ಕುಮ್ಮಕ್ಕಿದೆ ಎಂದು ಹೇಳಲಾಗ್ತಿದೆ ಎಂದು ಕೋಲಾರದಲ್ಲಿ ಬಿಜೆಪಿ ಸಂಸದ ಎಸ್.ಮುನಿಸ್ವಾಮಿ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ