ಪಕ್ಷ ಬಿಟ್ಟು ಬೇರಾವುದೇ ಸಂಘಟನೆ ಕಟ್ಟಬಾರದು: ಈಶ್ವರಪ್ಪಗೆ ಮುರಳೀಧರ್ ರಾವ್ ಖಡಕ್ ಎಚ್ಚರಿಕೆ

ಭಾನುವಾರ, 30 ಏಪ್ರಿಲ್ 2017 (13:12 IST)
ಪಕ್ಷದ ಆಂತರಿಕ ವಿಷಯಗಳನ್ನ ಮಾಧ್ಯಮಗಳ ಎದುರು ಚರ್ಚಿಸಬಾರದು. ಪಕ್ಷದ ವೇದಿಕೆಯಲ್ಲೇ ಆಂತರಿಕ ವಿಷಯ ಚರ್ಚಿಸಬೇಕು ಎಂದು ಹೈಕಮಾಂಡ್  ಮುರಳೀಧರ್ ರಾವ್ ಮೂಲಕ ರಾಜ್ಯ ನಾಯಕರಿಗೆ ಸ್ಪಷ್ಟ ಸಂದೇಶ ನೀಡಿದೆ.

ಬೆಂಗಳೂರಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಮುರಳಿಧರ್ ರಾವ್, ಯಾವುದೇ ಕಾರಣಕ್ಕೂ ಬ್ರಿಗೇಡ್ ಚಟುವಟಿಕೆ ನಡೆಸಬಾರದು. ಪಕ್ಷ ಬಿಟ್ಟು ಬೇರೆ ಯಾವುದೇ ಸಂಘಟನೆ ಕಟ್ಟಬಾರದು ಎಂದು ಮುರಳೀಧರ್ ರಾವ್ ಪರೋಕ್ಷವಾಗಿ ಈಶ್ವರಪ್ಪಗೆ ತಾಕೀತು ಮಾಡಿದ್ದಾರೆ. ಬೀದಿಯಲ್ಲಿ ಮಾತನಾಡಿದ ಭಾನುಪ್ರಕಾಶ್, ರೇಣುಕಾಚಾರ್ಯ, ಸುರಾನಾ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಮುರಳೀಧರ್ ರಾವ್ ಹೇಳಿದ್ದಾರೆ.

ಇತ್ತ, ನಾನಾಗಲಿ, ಈಶ್ವರಪ್ಪ, ಅಶೋಕ್ ಯಾರೇ ಆಗಲಿ ಹೈಕಮಾಂಡ್ ಆದೇಶ ಪಾಲಿಸಬೇಕು. ಸದ್ಯ. ಆಗಿರುವ ಗೊಂದಲಕ್ಕೆ ರಾಜ್ಯದ ಜನರ ಕ್ಷಮೆ ಕೋರುತ್ತೇವೆಂದು ವಕ್ತಾರ ಅರವಿಂದ ಲಿಂಬಾವಳಿ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ