ಕೊಲೆ ಯತ್ನ ಕೇಸ್: ಗ್ರಾಪಂ ಅಧ್ಯಕ್ಷ ಬಂಧನ
ಕೊಲೆ ಯತ್ನ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ.
ಮಂಗಳೂರಿನ ಮೂಡಬಿದಿರೆಯ ಇಮ್ತಿಯಾಜ್ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊತ್ತೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳುವಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸೋಮನಾಥ್ ಬಂಧನಕ್ಕೆ ಒಳಗಾದ ಆರೋಪಿಯಾಗಿದ್ದಾರೆ. ಕಳೆದ ವರ್ಷ ಗಂಟಾಲ್ ಕಟ್ಟೆಯಲ್ಲಿ ಇಮ್ತಿಯಾಜ್ ಕೊಲೆ ಯತ್ನ ನಡೆದಿತ್ತು.
ಪ್ರಶಾಂತ್ ಪೂಜಾರಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ ಇಮ್ತಿಯಾಜ್. ಈತನ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಆರೋಪಿಯನ್ನು ಬಂಧನ ಮಾಡಲಾಗಿದೆ.