ಕೊಡಗಿನ ಒಂದೇ ಕುಟುಂಬದ ನಾಲ್ವರ ಮರ್ಡರ್‌: ಹತ್ಯೆಗೆ ಇದೇ ಕಾರಣವಾಯಿತೇ

Sampriya

ಶುಕ್ರವಾರ, 28 ಮಾರ್ಚ್ 2025 (18:47 IST)
ಕೊಡಗು: ಒಂದೇ ಕುಟುಂಬದ ‌ನಾಲ್ವರವನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಕೊಡಗು ಜಿಲ್ಲೆಯ ಪೊನ್ನಂಪೇಟೆಯ ಬೇಗೂರು ಸಮೀಪದ ಕೊಳತೋಡು ಗ್ರಾಮದಲ್ಲಿ ನಡೆದಿದೆ.

ಕೇರಳ ಮೂಲದ ಗಿರೀಶ್(35) ಎಂಬಾತ ಒಂಟಿ ಮನೆಯಲ್ಲಿ ವಾಸಿಸುತ್ತಿದ್ದ ಒಂದೇ ಕುಟುಂಬದ ನಾಲ್ವರನ್ನೂ ಕತ್ತಿಯಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಗಿರೀಶ್ ತನ್ನ ಮಾವ ಕರಿಯ(75), ಅತ್ತೆ ಗೌರಿ(70), ಪತ್ನಿ ನಾಗಿ(30) ಹಾಗೂ ಪುತ್ರಿ ಕಾವೇರಿ(5)ಯನ್ನು ಕತ್ತಿಯಿಂದ ಕೊಚ್ಚಿ ಹತ್ಯೆಗೈದಿದ್ದಾನೆ ಎನ್ನಲಾಗಿದೆ.

ಏಳು ವರ್ಷಗಳ ಹಿಂದೆ ಹತ್ಯೆಯಾದ ನಾಗಿ ಅವರನ್ನು ಗಿರೀಶ್ ಮದುವೆಯಾಗಿದ್ದ. ಹತ್ಯೆ ಪ್ರಕರಣ ಸಂಬಂದ ತನಿಖೆ ನಡೆಯುತ್ತಿದ್ದು. ಆದರೆ ಮೇಲ್ನೋಟಕ್ಕೆ ಅಕ್ರಮ ಸಂಬಂಧ ಹಿನ್ನೆಲೆ  ಸರಣಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ನಾಗಿಯೊಂದಿಗೆ ಗಿರೀಶ್ ಮೂರನೇ ಮದುವೆಯಾಗಿ ತೋಟದ ಮನೆಯಲ್ಲೇ ಜೀವನ ನಡೆಸುತ್ತಿದ್ದ. ಇನ್ನೂ ಕಾಫಿ ಬೀಜ ಮಾರಾಟ ಮಾಡಿದ ಹಣದ ವಿಚಾರಕ್ಕಾಗಿ ನಾಲ್ವರ ನಡುವೆ ಗಲಾಟೆ ನಡೆಯುತ್ತಿತ್ತು. ಅಲ್ಲದೇ ಅನೈತಿಕ ಸಂಬಂಧದ ಹಿನ್ನೆಲೆಯಲ್ಲೂ ಗಲಾಟೆ ನಡೆದಿತ್ತು ಎನ್ನಲಾಗಿದೆ. ಸ್ಥಳಕ್ಕೆ ಕೊಡಗು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ರಾಮರಾಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ