ಛಲವಾದಿ ನಾರಾಯಣಸ್ವಾಮಿಗೆ ಉಚ್ಛಾಟಿಸುವ ಅಧಿಕಾರವಿಲ್ಲ: ಶಿವರಾಮ ಹೆಬ್ಬಾರ

Sampriya

ಶುಕ್ರವಾರ, 28 ಮಾರ್ಚ್ 2025 (18:00 IST)
Photo Courtesy X
ಶಿರಸಿ: 'ಪಕ್ಷದಲ್ಲಿ ಇಟ್ಟುಕೊಳ್ಳಬೇಕೇ, ಉಚ್ಛಾಟಿಸಬೇಕೇ ಎಂಬುದನ್ನು ನನಗೆ ನೊಟೀಸ್ ನೀಡಿದವರು ನಿರ್ಧರಿಸಬೇಕು. ರಾಜಕೀಯದಲ್ಲಿ ಹೆದರುವ ಕಾಲ ಮುಗಿದು ಹೋಗಿದೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

ಶುಕ್ರವಾರ ಪತ್ರಕರ್ತರ ಜತೆ ಮಾತನಾಡಿದ ಅವರು, 'ನನ್ನನ್ನೂ ಒಳಗೊಂಡು ಐದು ಮಂದಿಗೆ ಬಿಜೆಪಿ ಕೇಂದ್ರ ಶಿಸ್ತು ಸಮಿತಿ ವತಿಯಿಂದ ನೊಟೀಸ್ ಜಾರಿ ಮಾಡಲಾಗಿತ್ತು. 72 ಗಂಟೆಯಲ್ಲಿ ಉತ್ತರ ನೀಡುವಂತೆ ಸೂಚಿಸಲಾಗಿತ್ತು. ನಾನು ಕೂಡ ನೊಟೀಸ್ ಸ್ವೀಕರಿಸಿ 24 ಗಂಟೆಯಲ್ಲಿ ಸೂಕ್ತ ಉತ್ತರವನ್ನು ಲಿಖಿತವಾಗಿ ಕಳುಹಿಸಿದ್ದೇನೆ. ಮುಂದಿನ ದಿನಗಳಲ್ಲಿ ಉತ್ತರ ಏನೆಂದು ಮಾಧ್ಯಮದೆದುರು ತೆರೆದಿಡುತ್ತೇನೆ ಎಂದು ಮಾಹಿತಿ ನೀಡಿದರು.

ಬಸವನಗೌಡ ಯತ್ನಾಳ ನಂತರ ಉಚ್ಛಾಟನೆ ಆಗುವವರು ಎಸ್.ಟಿ.ಸೋಮಶೇಖರ ಹಾಗೂ ಶಿವರಾಮ ಹೆಬ್ಬಾರ ಎಂದು ಹೇಳಿಕೆ ನೀಡಿರುವ ಛಲವಾದಿ ನಾರಾಯಣಸ್ವಾಮಿಗೆ ಉಚ್ಛಾಟಿಸುವ ಅಧಿಕಾರವಿಲ್ಲ. ಅವರು ವಿಧಾನ ಪರಿಷತ್ ಸಭಾ ನಾಯಕರಷ್ಟೇ. ನನ್ನನ್ನು ಉಚ್ಛಾಟಿಸುವ ವೇದಿಕೆ ಬೇರೆಯಿದೆ. ಒಂದೊಮ್ಮೆ ಉಚ್ಛಾಟಿಸಿದರೆ ಆಗ ಅದರ ಬಗ್ಗೆ ಮಾತನಾಡುವೆ' ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ