ಲಂಡನ್ ನಲ್ಲಿ ಹಿಂದೂ ಮುಸ್ಲಿಂ ಗಲಾಟೆ.. ಕಾನೂನು ಸುವ್ಯವಸ್ಥೆ ಕಾಪಾಡಲು ಲಂಡನ್ ಸರ್ಕಾರ ಹರಸಾಹಸ

ಗುರುವಾರ, 22 ಸೆಪ್ಟಂಬರ್ 2022 (14:11 IST)

ಮುಸ್ಲಿಮನರು ಹಿಂದೂ ದೇವಾಲಯಗಳ ಸುತ್ತ ಸುತ್ತುವರೆದು ಪ್ರತಿಭಟನೆ ನಡೆಸುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಕೆಲವು ವರದಿಗಳ ಪ್ರಕಾರ ಮುಸ್ಲಿಂ ಸಂಘಟನೆಯೊಂದು ಶಾಂತಿಯುತ ಪ್ರತಿಭಟನೆಗೆ ಕರೆ ನೀಡಿತ್ತು. ಆದ್ರೂ, ದುರ್ಘಟನೆ ನಡೆದಿದೆ ಎಂದು ಹೇಳಲಾಗ್ತಿದೆ. ಬೇಕು ಅಂತಾನೆ ಕಿಚ್ಚು ಹೊತ್ತಿಸಲಾಗಿದ್ದು, ಲಂಡನ್‌ನಲ್ಲಿ ಪರ -ವಿರೋಧ ಪ್ರತಿಭಟನೆಗೆ ಕಾರಣವಾಗಿದೆ.

ನಾವು ಹಿಂದೂ, ಮುಸ್ಲಿಮರಾಗಷ್ಟೇ ಅಲ್ಲದೇ ಸಹೋದರ, ಸಹೋದರಿಯರಂತೆ ಇದ್ದೇವೆ. ಅಷ್ಟೇ ಅಲ್ಲದೇ ನಾವೆಲ್ಲರೂ ಲೀಸೆಸ್ಟನರ್ಸ್‌ ಕುಟುಂಬವಾಗಿದ್ದೇವೆ ಎಂದು ಹಿಂದೂ, ಮುಸ್ಲಿಂ ಸಮುದಾಯದ ಮುಖಂಡರು ಜಂಟಿ ಸಂದೇಶ ರವಾನಿಸಿದ್ದಾರೆ.

ಕಳೆದ ತಿಂಗಳು ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವೆ ನಡೆದ ಮೊದಲ ಪಂದ್ಯದಲ್ಲಿ ಭಾರತ ಜಯ ಸಾಧಿಸಿದ ಬಳಿಕ ಅಭಿಮಾನಿಗಳ ನಡುವೆ ಘರ್ಷಣೆ ನಡೆದಿತ್ತು. ಇದೀಗ ಈ ಘರ್ಷಣೆಯನ್ನು ಕೊನೆಗೊಳಿಸುವಂತೆ ಬ್ರಿಟನ್ನ ಲೀಸೆಸ್ಟರ್‌ನಲ್ಲಿರುವ ಹಿಂದೂಗಳು ಹಾಗೂ ಮುಸ್ಲಿಮರ ಸಮುದಾಯದ ಮುಖಂಡರು ಜಂಟಿ ಹೇಳಿಕೆ ನೀಡಿದ್ದಾರೆ.

ಇದೆಲ್ಲದರ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಮಸೀದಿ ಹಾಗೂ ದೇವಾಲಯಗಳ ಧಾರ್ಮಿಕ ಸ್ಥಳಗಳ ಪಾವಿತ್ರ್ಯತೆಯನ್ನು ಗೌರವಿಸಬೇಕು. ಅವಹೇಳನಕಾರಿ ಹಾಡುಗಳು ಅಥವಾ ಪೂಜೆಯ ಬಟ್ಟೆಯ ವಿರುದ್ಧ ದೈಹಿಕ ದಾಳಿಗಳನ್ನು ಯಾರೂ ಮಾಡಬಾರದು ಹಾಗೂ ಯಾರೂ ಪ್ರಚೋದನೆಗೆ ಒಳಗಾಗಬಾರದು ಎಂದು ಮನವಿ ಮಾಡಲಾಗಿದೆ. ಇನ್ನು, ಹಿಂದೂ ದೇವಾಲಯ ಧ್ವಂಸಗೊಳಿಸಿದ ಪ್ರಕರಣ ಸಂಬಂಧ, 47 ಜನರನ್ನು ವಶಕ್ಕೆ ಪಡೆಯಲಾಗಿದೆ. ಅಷ್ಟೇ ಅಲ್ಲದೆ, ಘರ್ಷಣೆ ಸಂದರ್ಭದಲ್ಲಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಯುವಕ ತಪ್ಪೊಪ್ಪಿಕೊಂಡಿದ್ದಾನೆ. ಹೀಗಾಗಿ, ಆ ಯುವಕನಿಗೆ 10 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ