ಮುಸ್ಲಿಮರು ಯೋಚನೆ ಮಾಡಬೇಕಾದ ಅಗತ್ಯವಿದೆ : ಸಿ.ಟಿ ರವಿ

ಬುಧವಾರ, 28 ಸೆಪ್ಟಂಬರ್ 2022 (12:16 IST)
ಬೆಂಗಳೂರು : ಐಸಿಸ್ ಮಾದರಿಯ ಉಗ್ರಗಾಮಿಗಳನ್ನು ಬೆಂಬಲಿಸಿದ, ದೇಶದ ಒಳಗೆ ಅಭದ್ರತೆ, ಅಂತರ್ಯುದ್ಧ,

ದೇಶದ್ರೋಹದ ಸಂಚನ್ನು ಮಾಡುತ್ತಿದ್ದ ಪಿಎಫ್ಐ ಹಾಗೂ ಅದರ ಸಹ ಸಂಘಟನೆಗಳನ್ನು ನಿಷೇಧಿಸಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತೇನೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಸರ್ಕಾರವನ್ನು ಅಭಿನಂದಿಸಿದ್ದಾರೆ.

ಪಿಎಫ್ಐ ಬ್ಯಾನ್ ಹಿನ್ನೆಲೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ ಸಿಟಿ ರವಿ, ದೇಶ ವಿಭಜಕ ಶಕ್ತಿಗಳನ್ನು ಸರ್ಕಾರ ಬ್ಯಾನ್ ಮಾಡಿದೆ. ಇನ್ನು ಸಮಾಜದ ಸರದಿ.
ಸರ್ಕಾರ ಈ ಸಂಘಟನೆಗಳನ್ನು ಬ್ಯಾನ್ ಮಾಡಿದೆಯಾದರೂ ಇಷ್ಟು ಸಾಕಾಗುವುದಿಲ್ಲ. ಸಮಾಜ ಈ ನಿಟ್ಟಿನಲ್ಲಿ ಚಿಂತನೆ ನಡೆಸಬೇಕಾಗಿದೆ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ