ಸರಕಾರದ ವಿರುದ್ಧ ಮುತಾಲಿಕ್ ಆಕ್ರೋಶ
ಕಾಂಗ್ರೆಸ್ - ಜೆಡಿಎಸ್ ಸರಕಾರವೂ ಹಿಂದೂ ಕಾರ್ಯಕರ್ತರನ್ನ, ಹಿಂದೂ ಸಂಘಟನೆಗಳನ್ನ ವ್ಯವಸ್ಥಿತವಾಗಿ ಮುಗಿಸಲು ಹುನ್ನಾರು ನಡೆಸಿದೆ ಎಂದು ಸರಕಾರದ ವಿರುದ್ಧ ಪ್ರಮೋದ ಮುತಾಲಿಕ್ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ವಿರುದ್ಧ ಕಿಡಿ ಕಾರಿರುವ ಪ್ರಮೋದ ಮುತಾಲಿಕ, ಗೌರಿ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪರಶುರಾಮ ವಾಗ್ಮೋರೆ ಅವರು ಹೇಳಿಕೆಯನ್ನು ನೀಡಿದ್ದಾರೆ.
ಎಸ್ ಐ ಟಿ ಪೋಲಿಸರು ಗೌರಿ ಹತ್ಯೆ ಮಾಡಿದ್ದು ನಿವೇ ಎಂದು ಒಪ್ಪಿಕ್ಕೊಳ್ಳಿ. ನಿಮಗೆ 25 ಲಕ್ಷ ರೂ. ಹಣವನ್ನ ಕೊಡುತ್ತೇವೆ ಎಂದು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ. ಪರಶುರಾಮ ವಾಗ್ಮೋರೆ ಅವರ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿದ್ದಾರೆ.
ಎಸ್ ಐ ಟಿ ಪೋಲಿಸರ ವಿರುದ್ದ ಪ್ರಮೋದ ಮುತಾಲಿಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಗಾವಿಯಲ್ಲಿ ಪ್ರಮೋದ ಮುತಾಲಿಕ ಈ ಹೇಳಿಕೆಯನ್ನು ನೀಡಿದ್ದಾರೆ.