ಮೈ ಕೈ ಮುಟ್ಟುತ್ತಿದ್ದ ಕಾಮುಕ ಮಾವ ; ಕಿರುಕುಳ ತಾಳದೇ ಜೀವ ಬಿಟ್ಟ ಸೊಸೆ

ಶುಕ್ರವಾರ, 6 ಮಾರ್ಚ್ 2020 (19:04 IST)
ಪ್ರೀತಿಸಿ ಮದುವೆಯಾಗಿದ್ದ ಯುವತಿಯೊಬ್ಬಳು ತನ್ನ ಮಾವನ ಕಿರುಕುಳದಿಂದಾಗಿ ಸಾವಿಗೆ ಶರಣಾಗಿದ್ದಾಳೆ.

ರಮೇಶ್ ಎಂಬಾತನನ್ನು ಪ್ರಿಯಾಂಕಾ ಪ್ರೀತಿಮಾಡುತ್ತಿದ್ದಳು. ಇವರಿಬ್ಬರ ಪ್ರೀತಿಗೆ ಒಪ್ಪಿ ಎರಡೂ ಮನೆಯವರು ಮದುವೆ ಮಾಡಿದ್ದಾರೆ. ಈ ಜೋಡಿಗೆ ಆರೇಳು ತಿಂಗಳ ಮಗು ಇದೆ.

ಆದರೆ ಸೊಸೆಯ ಮೇಲೆಯೇ ಮಾವ ಕಾಮದ ದೃಷ್ಟಿ ಹರಿಸಿದ್ದಾನೆ.  ಪ್ರಿಯಾಂಕಾ ಒಬ್ಬಂಟಿಯಾಗಿ ಇದ್ದಾಗಲೆಲ್ಲಾ ಆಕೆಯ ಮೈ ಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ.

ಹೀಗಾಗಿ ರಮೇಶ್ ತನ್ನ ಪತ್ನಿ ಪ್ರಿಯಾಂಕಳನ್ನು ತವರು ಮನೆಗೆ ಕಳಿಸಿದ್ದನು. ಆದರೆ ಮಾವನ ಕಾಟಕ್ಕೆ ಹೆದರಿ ಪ್ರಿಯಾಂಕಾ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಹೈದ್ರಾಬಾದ್ ನ ಸೈಫಾಬಾದ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ