ಮೈಸೂರು ಗಲಭೆ: ಎಫ್ಐಆರ್ ನಲ್ಲಿದೆ ಭಯಾನಕ ಅಂಶಗಳು

Krishnaveni K

ಗುರುವಾರ, 13 ಫೆಬ್ರವರಿ 2025 (09:31 IST)
ಮೈಸೂರು: ಸೋಷಿಯಲ್ ಮೀಡಿಯಾ ಪೋಸ್ಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮೊನ್ನೆ ಮೈಸೂರಿನಲ್ಲಿ ಮುಸ್ಲಿಂ ಯುವಕರ ಗುಂಪು ಪೊಲೀಸ್ ಠಾಣೆಗೆ ಕಲ್ಲೆಸೆದು ದಾಂಧಲೆ ನಡೆಸಿದ ಪ್ರಕರಣದ ಎಫ್ಐಆರ್ ರೆಡಿಯಾಗಿದ್ದು, ಇದರಲ್ಲಿ ಭಯಾನಕ ಅಂಶಗಳು ದಾಖಲಾಗಿವೆ.

ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಧರ್ಮಗುರುಗಳ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದ ಸುರೇಶ್ ಎಂಬಾತನನ್ನು ಬಂಧಿಸಿಡಲಾಗಿತ್ತು. ಆತನನ್ನು ಅಲ್ಲಿ ಬಂಧಿಸಿಡಲಾಗಿದೆ ಎಂಬ ಸುದ್ದಿ ತಿಳಿದು ಮುಸ್ಲಿಂ ಯುವಕರ ಗುಂಪು ಠಾಣೆ ಮೇಲೆ ದಾಳಿ ನಡೆಸಿತ್ತು.

ಘಟನೆಯಲ್ಲಿ ಪೊಲೀಸ್ ವಾಹನಗಳು ಜಖಂಗೊಂಡರೆ 10 ಕ್ಕೂ ಹೆಚ್ಚು ಪೊಲೀಸರಿಗೆ ಗಾಯಗಳಾಗಿತ್ತು. ಗಲಾಟೆ ಮಾಡಿದವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯ ಕುರಿತು ಪೊಲೀಸರು ಈಗ ಎಫ್ಐಆರ್ ದಾಖಲಿಸಿದ್ದಾರೆ.

ಉದಯಗಿರಿ ಪಿಎಸ್ಐ ಸುನಿಲ್ ದೂರಿನ ಆಧಾರದಲ್ಲಿ ಎಫ್ಐಆರ್ ದಾಖಲಾಗಿದೆ. ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ, ಅವಾಚ್ಯ ಶಬ್ಧಗಳಿಂದ ನಿಂದನೆ, ಸರ್ಕಾರೀ ಕೆಲಸಕ್ಕೆ ಅಡ್ಡಿಪಡಿಸಿದ ಪ್ರಕರಣ ದಾಖಲಿಸಲಾಗಿದೆ. ಕೈಗೆ ಸಿಕ್ಕ ವಸ್ತುಗಳಿಂದ ಪೊಲೀಸರ ಮೇಲೆ ದಾಳಿ ಮಾಡಿದ್ದರು. ಜೊತೆಗೆ ಸ್ವಲ್ಪ ಯಾಮಾರಿದ್ರೂ ಪೊಲೀಸರ ಹೆಣಗಳು ಬೀಳುತ್ತಿದ್ದವು ಎಂದೂ ಉಲ್ಲೇಖಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ