ಬೆಳಗಾವಿಯ ಹಂಗರಗಾದಲ್ಲಿ ವಿಚಿತ್ರ ಘಟನೆ: ಮನೆಯಲ್ಲಿ ಕುದಿಯುತ್ತಿದೆ ಭೂಮಿ

ಶನಿವಾರ, 29 ಏಪ್ರಿಲ್ 2017 (16:32 IST)
ಮನೆಯ ನಿರ್ದಿಷ್ಟ ಜಾಗದಲ್ಲಿ ಭೂಮಿ ಕುದಿಯುತ್ತಿರುವ ವಿಚಿತ್ರ ಪ್ರಕರಣ ಬೆಳಗಾವಿ ಜಿಲ್ಲೆಯ ಹಂಗರಗಾ ಗ್ರಾಮದಲ್ಲಿ ವರದಿಯಾಗಿದೆ. ಒಂದು ಅಡಿ ಜಾಗದಲ್ಲಿ ಭೂಮಿಯ ಉಷ್ಣಾಂಶ ಮಿತಿ ಮೀರಿ ಹೆಚ್ಚಾಗುತ್ತಿದೆ. .ಮುಟ್ಟಲು ಸಾಧ್ಯವಾಗದಷ್ಟು ಉಷ್ಣಾಂಶ ದಾಖಲಾಗಿದೆ.

ಸ್ಥಳಕ್ಕೆ ಎಸಿ ಜಯಶ್ರೀ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಎಲೆಕ್ಟ್ರಿಸಿಟಿ ಗ್ರೌಂಡಿಗ್ ಲೀಕ್ ಆದರೆ ಈ ರೀತಿಯ ಉಷ್ಣಾಂಶ ಹೆಚ್ಚುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ, ಈ ಮನೆಗೆ ವಿದ್ಯುತ್ ಸಂಪರ್ಕವೇ ಇಲ್ದಿರುವುದು ಆ ಊಹೆಗೂ ಅವಕಾಶ ಇಲ್ಲದಾಗಿದೆ.

ಭೀಮಸೇನ್ ಕಾಂಬಳೆ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಮನೆಯ ಬಾಲಕನೊಬ್ಬ ರಾತ್ರಿ ನಡೆದಾಡುವ ನೆಲ ಬಿಸಿಯಾಗಿರುವುದು ಕಂಡುಬಂದಿದೆ. ಬಳಿಕ ಭೂಮಿ ಅಗೆದಾಗ ಒಳಗಿನ ಮಣ್ಣು ಮತ್ತು ಕಲ್ಲು ಸಹ ಅಧಿಕ ಬಿಸಿಯಾಗಿರುವುದು ತಿಳಿದುಬಂದಿದೆ. ಭೂಮಿಯೊಳಗಿನ ಲಾವಾ ಅಥವಾ ಬೇರೆ ಯಾವ ಕಾರಣಕ್ಕೆ ಬಿಸಿಯಾಗಿದೆ ಎಂಬುದು ಅಧಿಕಾರಿಗಳ ಪರಿಶೀಲನೆ ಬಳಿಕವೇ ಗೊತ್ತಾಗಬೇಕಿದೆ.  

ವೆಬ್ದುನಿಯಾವನ್ನು ಓದಿ