ಇಂದು ಶಿರಾದಲ್ಲಿ ನಡ್ಡಾ ಮತ ಬೇಟೆ
ಉಪಾ ಚುನಾವಣೆಯಲ್ಲಿ ಗೆದ್ದು ಇತಿಹಾಸ ಸೃಷ್ಟಿಸಿದ ಶಿರಾ ಕ್ಷೇತ್ರ ದಲ್ಲಿ ಜನ ಸಂಕಲ್ಪಯಾತ್ರೆ ನಡೆಸಿ ಇನ್ನಷ್ಟು ಭದ್ರಗೊಳಿಸಲು ಸಜ್ಜಾಗಿದೆ. ಪಾವಗಡ, ಕೊರಟಗೆರೆ, ಮಧುಗಿರಿ ಭಾಗದಲ್ಲಿ ಬಿಜೆಪಿಗೆ ನೆಲೆಯೇ ಇಲ್ಲ. ಹಾಗಾಗಿ ಈ ಭಾಗದಲ್ಲಿ ಪಕ್ಷ ಬಲಗೊಳಿಸಲು ಸಜ್ಜಾದ ಬಿಜೆಪಿ ಶಿರಾದಲ್ಲಿ ಬೃಹತ್ ಸಂಕಲ್ಪ ಯಾತ್ರೆ ನಡೆಸುತ್ತಿದೆ.
ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ರಾಜ್ಯಾಧ್ಯಕ್ಷ ಕಟೀಲ್, ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ಘಟಾನುಘಟಿ ನಾಯಕರು ದಂಡೇ ಉಪಸ್ಥಿತಿ ಇರಲಿದೆ. ಜನ ಸಂಕಲ್ಪಯಾತ್ರೆ ಹಿನ್ನೆಲೆಯಲ್ಲಿ ಶಿರಾ ನಗರ ಸಂಪೂರ್ಣ ಕೇಸರಿಮಯವಾಗಿದೆ.