ಸಿಎಂಗೆ ಸಿದ್ದರಾಮಯ್ಯ ಬದಲು ಸುಳ್ಳುರಾಮಯ್ಯ ಹೆಸರು ಚೆನ್ನಾಗಿ ಒಪ್ಪುತ್ತದೆ: ಆರ್‌ ಅಶೋಕ್ ಲೇವಡಿ

Sampriya

ಭಾನುವಾರ, 17 ನವೆಂಬರ್ 2024 (16:48 IST)
ಬೆಂಗಳೂರು:  ಪ್ರಧಾನಿ ಮೋದಿಯಿಂದ ಸಾಕ್ಷಿ ಕೇಳುತ್ತಿರುವ ಸಿಎಂ ಸಿದ್ದರಾಮಯ್ಯಗೆ ನಾಚಿಗೆಯಾಗಬೇಕು.  ಸಿದ್ದರಾಮಯ್ಯ, ಡಿಕೆಶಿ, ಅಂಬಿಕಾಪತಿ ಈ ಸುಳ್ಳಿನ ಮಹಲ್ ಕಟ್ಟಿದ್ದರು ಅದು ಈಗ ಕುಸಿದು ಬಿದ್ದಿದೆ. ಸಿದ್ದರಾಮಯ್ಯ ಅವರ ಹೆಸರನ್ನು ಸುಳ್ಳುರಾಮಯ್ಯ ಎಂದು ಬದಲಾಯಿಸಬೇಕೆಂದು ವಿಪಕ್ಷ ನಾಯಕ ಆರ್‌ ಅಶೋಕ್ ವಾಗ್ದಾಳಿ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ 40% ಕಮೀಷನ್ ವಿಚಾರವಾಗಿ ಮಾತನಾಡಿದ ಅವರು,  ರಾಜ್ಯದ ಜನತೆಗೆ ಸುಳ್ಳು ಹೇಳಿ, ತಾವು ಸುಳ್ಳುರಾಮಯ್ಯ ಎಂದು ಖುದ್ದು ಸಿಎಂ ಸಾಬೀತು ಪಡಿಸಿದ್ದಾರೆ. ತಪ್ಪು ಮಾಡಿಲ್ಲ ಎಂದು ವಾದ ಮಾಡಿ ಇದಿಗ ಸರ್ಕಾರಕ್ಕೆ ಸೈಟು ವಾಪಾಸ್ ನೀಡಿದರು. ಈಗ ಅವರು ಮಾಡಿದ 40% ಕಮೀಷನ್ ಆರೋಪವೂ ಸುಳ್ಳಾಗಿದೆ. ಇನ್ಮುಂದೆ ಸಿದ್ದರಾಮಯ್ಯ ತಮ್ಮ ಹೆಸರನ್ನು ಸುಳ್ಳು ರಾಮಯ್ಯ ಎಂದು ಬದಲಾಯಿಸಿಕೊಳ್ಳಲಿ ಎಂದರು.

ನಾನು ಇವತ್ತಿಗೆ ಪ್ರತಿಪಕ್ಷ ನಾಯಕನಾಗಿ ಒಂದು ವರ್ಷವಾಗಿದೆ. ಹಾಗೇ ಇದೇ ಹೊತ್ತಿನಲ್ಲಿ ನಮ್ಮ ಸರ್ಕಾರದ ಮೇಲಿನ 40% ಕಮೀಷನ್ ಆರೋಪ ಸುಳ್ಳು ಎನ್ನುವುದು ಸಾಬೀತಾಗಿದೆ. ಕಮೀಷನ್ ಆರೋಪ ಮಾಡಿರುವುದು ಕಾಂಗ್ರೆಸ್‌ನ ಟೂಲ್‌ಕಿಟ್‌ನ ಭಾಗವಾಗಿದೆ.

ಇದುವರೆಗೆ 40% ಕಮೀಷನ್ ಆರೋಪಕ್ಕೆ ಕಾಂಗೆಸ್‌ನವರು ದಾಖಲೆ ಕೊಟ್ಟಿಲ್ಲ. ಆಧಾರರಹಿತ, ಸುಳ್ಳು ಆರೋಪ ಮಾಡಿದ್ದರು. ನಮ್ಮ ಮೇಲಿನ ಆರೋಪ ಸುಳ್ಳು ಎಂದು ಲೋಕಾಯುಕ್ತ ತನಿಖೆಯಿಂದಲೇ ಹೊರಬಿದ್ದಿದೆ. ಈಗಿರುವ ಕಾಂಗ್ರೆಸ್ ಸರ್ಕಾರ 60% ಕಮೀಷನ್ ಸರ್ಕಾರ ಆಗಿದೆ ಎಂದು ಕಿಡಿಕಾರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ