ಬೆಂಗಳೂರು ನಮ್ಮ ಮೆಟ್ರೋದ 3ನೇ ಹಂತದ ಯೋಜನೆಯನ್ನು ಅಂತಿಮಗೊಳಿಸಲಾಗಿದೆ.
42 ಕಿ.ಮೀ ಉದ್ದದ ಯೋಜನೆ ಇದಾಗಿರಲಿದೆ, ಈ ಯೋಜನೆಯಲ್ಲಿ ಉಪನಗರ ರೈಲು, ಬಸ್ ಡಿಪೋಗಳು ಸೇರಿದಂತೆ 9 ಕಡೆಗಳಲ್ಲಿ ಸಂಪರ್ಕ ಕಲ್ಪಿಸುತ್ತದೆ. ಇದು ತಡೆ ರಹಿತ ಸಂಪರ್ಕಕ್ಕೆ ಸಹಾಯ ಮಾಡುತ್ತದೆ.ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ಸಿದ್ಧಪಡಿಸಿರುವ ವರದಿ ಪ್ರಕಾರ, ಹಂತ-3 ಎರಡು ಮೆಟ್ರೋ ಕಾರಿಡಾರ್‌ಗಳನ್ನು ಹೊಂದಿರುತ್ತದೆ. ಕಾರಿಡಾರ್ 1 ಹೊರ ವರ್ತುಲ ರಸ್ತೆಯಲ್ಲಿ ಜೆಪಿನಗರದಿಂದ ಹೆಬ್ಬಾಳದವರೆಗೆ 31 ಕಿ.ಮೀ ಸಾಗಲಿದೆ.