ನಮ್ಮ ಮೆಟ್ರೋ ಅವಧಿ ರಾತ್ರಿ 11ವರೆಗೆ ವಿಸ್ತರಣೆ

ಶನಿವಾರ, 17 ಜೂನ್ 2017 (10:53 IST)
ಬೆಂಗಳೂರು: ನಮ್ಮ ಮೆಟ್ರೋ ಮೊದಲ ಹಂತ ಲೋಕಾರ್ಪಣೆಗೊಳ್ಳಲು ಕ್ಷಣಗಣನೆ ಆರಂಭವಾಗಿರುವಂತೆಯೇ ಮೆಟ್ರೋ ರೈಲು ಪ್ರಯಾಣಿಕರಿಗೆ ಬಿಎಂಆರ್ ಸಿಎಲ್ ಮೆಟ್ರೋ ರೈಲು ಸಂಚಾರ ಅವಧಿಯನ್ನು ವಿಸ್ತರಿಸಿದೆ.
 
ಮೆಟ್ರೋ ರೈಲು ಈ ಮೊದಲು ರಾತ್ರಿ10 ಕ್ಕೆ ಕೊನೆಗೊಳ್ಳುತ್ತಿದ್ದು, ಇನ್ನು ಮುಂದೆ ರಾತ್ರಿ 11.25ರವರೆಗೂ ಲಭ್ಯವಾಗಲಿದೆ ಎಂದು ಅಧಿಕಾಗಿಳು ತಿಳಿಸಿದ್ದಾರೆ. ಆದರೆ ದಿನದ ಈ ಕೊನೆ ರೈಲು ನಾಡಪ್ರಭು ಕೆಂಪೇಗೌಡ ನಿಲ್ದಾಣದಿಂದ  ಮಾತ್ರ ಬಿಡಲಿದ್ದು ನಗರದ ನಾಲ್ಕು ದಿಕ್ಕುಗಳಿಗೂ ಸಂಚಾರ ಸಾಧ್ಯವಾಗಲಿದೆ. ಜೂನ್‌ 19ರಿಂದಲೇ ಈ ಸಮಯ ಅನ್ವಯವಾಗಲಿದೆ ಎಂದು ಮೆಟ್ರೋ ನಿಗಮ ವೇಳಾಪಟ್ಟಿ ಬಿಡುಗಡೆ ಮಾಡಿದೆ.
 
ಇನ್ನು ಬೆಳಗ್ಗೆ 6ಕ್ಕೆ ಆರಂಭವಾಗುತ್ತಿದ್ದ ಮೆಟ್ರೋ ಇನ್ನು ಮುಂದೆ ಬೆಳಗ್ಗೆ 5 ಗಂಟೆಗೆ ಆರಂಭವಾಗಲಿದ್ದು, ಬೆಳ್ಳಂಬೆಳಗ್ಗೆ ದೂರದೂರುಗಳಿಗೆ ಪ್ರಯಾಣ ಮಾಡುವವರಿಗೆ ಅನುಕೂಲವಾಗಲಿದೆ. ಇನ್ನು ಮುಂದೆ ಮೆಜೆಸ್ಟಿಕ್‌ ನಿಲ್ದಾಣದಿಂದ  ಪೂರ್ವದ ಬೈಯ್ಯಪ್ಪನಹಳ್ಳಿ, ಇಂದಿರಾನಗರ, ಎಂಜಿ ರಸ್ತೆ, ಪಶ್ಚಿಮದ ಮೈಸೂರು ರಸ್ತೆ ವಿಜಯನಗರ, ಅತ್ತಿಗುಪ್ಪೆ, ಉತ್ತರದ ನಾಗಸಂದ್ರ, ಜಯನಗರ, ಕೆ.ಆರ್‌.ಮಾರುಕಟ್ಟೆ, ದಕ್ಷಿಣದ ಪೀಣ್ಯ, ನಾಗಸಂದ್ರ ಕಡೆಗೆ ರಾತ್ರಿ  11.25ರವರೆಗೂ ಮೆಟ್ರೋ ಮಾರ್ಗಗಳಲ್ಲಿ ಪ್ರಯಾಣಿಸಬಹುದಾಗಿದೆ.
 

ವೆಬ್ದುನಿಯಾವನ್ನು ಓದಿ