ಸಂಕ್ರಾಂತಿ ಬಳಿಕ ಹಾಲಿನ ಬೆಲೆಯೂ ಹೆಚ್ಚು, ಪ್ರಮಾಣ ಕಡಿಮೆ: ಗ್ರಾಹಕರಿಗೆ ಸರ್ಕಾರದ ಶಾಕ್

Krishnaveni K

ಗುರುವಾರ, 26 ಡಿಸೆಂಬರ್ 2024 (13:49 IST)
ಬೆಂಗಳೂರು: ಸಂಕ್ರಾಂತಿ ಹಬ್ಬದ ಬಳಿಕ ರಾಜ್ಯದ ಜನತೆಗೆ ಸರ್ಕಾರ ಮತ್ತೊಂದು ಶಾಕ್ ಕೊಡಲು ಸಿದ್ಧತೆ ನಡೆಸಿದೆ. ನಂದಿನಿ ಹಾಲಿನ ದರ ಏರಿಕೆಯಾಗಲಿದ್ದು, ಪ್ರಮಾಣವೂ ಕಡಿಮೆಯಾಗಲಿದೆ.

ಕಳೆದ ಜೂನ್ ನಲ್ಲಿ ನಂದಿನಿ ಹಾಲಿನ ದರ 2 ರೂ.ಗೆ ಏರಿಕೆ ಮಾಡಿದ್ದ ಸರ್ಕಾರ 50 ಎಂಎಲ್ ಹಾಲು ಹೆಚ್ಚುವರಿಯಾಗಿ ನೀಡಿತ್ತು. ಇದೀಗ ಮತ್ತೆ ಹಾಲಿನ ದರ ಏರಿಕೆ ಮಾಡುವ ಬಗ್ಗೆ ಕಳೆದ ಕೆಲವು ದಿನಗಳಿಂದ ಸುದ್ದಿ ಕೇಳಿಬರುತ್ತಲೇ ಇದೆ. ಇತ್ತೀಚೆಗೆ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಕೂಡಾ ಸುಳಿವು ನೀಡಿದ್ದಾರೆ.

ಮೂಲಗಳ ಪ್ರಕಾರ ಸಂಕ್ರಾಂತಿ ಹಬ್ಬದ ಬಳಿಕ ನಂದಿನಿ ಹಾಲಿನ ದರ ಏರಿಕೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಈ ಬಾರಿ ಬರೋಬ್ಬರಿ 5 ರೂ.ಗಳಷ್ಟು ದರ ಏರಿಕೆ ಮಾಡಲು ಮುಂದಾಗಿದೆ. ಇದರ ಜೊತೆಗೆ ಇಷ್ಟು ದಿನ ಹೆಚ್ಚುವರಿಯಾಗಿ ನೀಡುತ್ತಿದ್ದ 50 ಎಂಎಲ್ ಹಾಲಿನ ಪ್ರಮಾಣವೂ ಕಡಿಮೆಯಾಗಲಿದೆ.

ಆ ಮೂಲಕ ಗ್ರಾಹಕರ ಜೇಬಿಗೆ ಅಕ್ಷರಶಃ ಕತ್ತರಿ ಬೀಳಲಿದೆ. ಈ ಮೊದಲು ಬೆಲೆ ಏರಿಕೆ ಬಗ್ಗೆ ಸಮರ್ಥನೆ ಮಾಡಿಕೊಂಡಿದ್ದ ಸಿದ್ದು ಸರ್ಕಾರ ಏರಿಕೆಯಾದ ಹಣವನ್ನು ರೈತರಿಗೆ ಪ್ರೋತ್ಸಾಹ ಧನವಾಗಿ ನೀಡಲಾಗುತ್ತದೆ ಎಂದಿತ್ತು. ಆದರೆ ರೈತರ ಹೆಸರಿನಲ್ಲಿ ಗ್ರಾಹಕರಿಗೆ ಮಾತ್ರ ಬರೆ ಬೀಳಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ