ತಾಲೂಕಿನ ಜನರ ಕನಸನ್ನು ನನಸು ಮಾಡುವತ್ತ ಕೆಲಸಗಳನ್ನು ಆರಂಭಿಸುತ್ತೇನೆ- ನಾರಾಯಣಗೌಡ
ಸೋಮವಾರ, 9 ಡಿಸೆಂಬರ್ 2019 (11:57 IST)
ಮಂಡ್ಯ : ಕೆ. ಆರ್ ಪೇಟೆಯ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾದ ನಾರಾಯಣಗೌಡರು ಭರ್ಜರಿ ಗೆಲುವು ಸಾಧಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ಧಿಗಾಗಿ ನಾನು ಕೆಲಸ ಮಾಡಿದ್ದೇನೆ ಹಾಗೂ ಸಿಎಂ ಯಡಿಯೂರಪ್ಪ ಕೆಲಸ ಮಾಡುತ್ತಿದ್ದಾರೆ. ಇದನ್ನು ಗಮನಿಸಿ ಕ್ಷೇತ್ರದ ಜನತೆ ಮತ ನೀಡಿದ್ದಾರೆ. ಅಭಿವೃದ್ಧಿಯೇ ನನ್ನ ಗುರಿಯಾಗಿದ್ದು, ತಾಲೂಕಿನ ಜನರ ಕನಸನ್ನು ನನಸು ಮಾಡುವತ್ತ ಕೆಲಸಗಳನ್ನು ಆರಂಭಿಸುತ್ತೇನೆ.
ಇದೇ ವೇಳೆ ತನ್ನ ಪರ ಕೆಲಸ ಮಾಡಿದ ಸಿಎಂ, ಡಿಸಿಎಂ ಅಶ್ವತ್ ನಾರಾಯಣ , ಉಸ್ತುವಾರಿ ವಹಿಸಿಕೊಂಡ ವಿಜಯೇಂದ್ರ ಹಾಗೂ ಕಾರ್ಯಕರ್ತರಿಗೆ ಧನ್ಯವಾದ ತಿಳಿಸಿದ್ದಾರೆ.