ಅಂಚೆ ಮತದಲ್ಲಿ 250ಕ್ಕೆ 250 ಮತ ಪಡೆದ ಆನಂದ್ ಸಿಂಗ್

ಸೋಮವಾರ, 9 ಡಿಸೆಂಬರ್ 2019 (09:55 IST)
ವಿಜಯನಗರ : ಇಂದು ಉಪಚುನಾವಣೆಯ ಮತ ಎಣಿಕೆ ಕಾರ್ಯ ಆರಂಭವಾಗಿದ್ದು, ವಿಜಯ ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಮುನ್ನಡೆ ಸಾಧಿಸಿದ್ದಾರೆ.


ವಿಜಯ ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಆನಂದ್ ಸಿಂಗ್ ಕಣಕ್ಕೀಳಿದಿದ್ದು, ಅಂಚೆ ಮತದಲ್ಲಿ 250ಕ್ಕೆ 250 ಮತಗಳನ್ನು ಆನಂದ್ ಸಿಂಗ್ ಪಡೆದಿದ್ದಾರೆ ಎನ್ನಲಾಗಿದೆ.

 

ಹಾಗೇ ವಿಜಯನಗರದ 4ನೇ ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿಆನಂದ್ ಸಿಂಗ್ ಗೆ 18, 305 ಮತ, ಕಾಂಗ್ರೆಸ್ ಗೆ 14,685 ಮತ ಲಭಿಸಿದ್ದು, ಈ ಮೂಲಕ  ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ 3620 ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಿದ್ದಾರೆ ಎನ್ನಲಾಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ