ಮಗಳು ಅಕ್ಷತಾ ಜೊತೆ ಐಸ್ ಕ್ರೀಂ ಸವಿದ ನಾರಾಯಣ ಮೂರ್ತಿ

Krishnaveni K

ಮಂಗಳವಾರ, 13 ಫೆಬ್ರವರಿ 2024 (10:26 IST)
Photo Courtesy: Twitter
ಬೆಂಗಳೂರು: ಇನ್ ಫೋಸಿಸ್ ಸಂಸ್ಥಾಪಕ, ಉದ್ಯಮಿ ನಾರಾಯಣ ಮೂರ್ತಿ ಮಗಳು, ಬ್ರಿಟನ್ ಪ್ರಧಾನಿ ರಿಷಿ ಸುನಾಕ್ ಪತ್ನಿ ಅಕ್ಷತಾ ಮೂರ್ತಿ ಜೊತೆ ಐಸ್ ಕ್ರೀಂ ಸವಿಯುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ತಂದೆ-ಮಗಳು ಬೆಂಗಳೂರಿನ ರೆಸ್ಟೋರೆಂಟ್ ನಲ್ಲಿ ಜೊತೆಯಾಗಿ ಕುಳಿತು ಐಸ್ ಕ್ರೀಂ ಸವಿಯುವ ಫೋಟೋ ನೋಡಿ ನೆಟ್ಟಿಗರು ತಂದೆ-ಮಗಳು ಎಂದರೆ ಹೀಗಿರಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಈ ಹಿಂದೆ ಅಕ್ಷತಾ ಪತಿ ರಿಷಿ ಸುನಕ್ ಜೊತೆ ಔದ್ಯೋಗಿಕ ಭೇಟಿಗೆ ಅಕ್ಷತಾ ಭಾರತಕ್ಕೆ ಬಂದಿದ್ದರು.

ಆದರೆ ಈಗ ಒಬ್ಬ ಮಗಳಾಗಿ ಸ್ವದೇಶಕ್ಕೆ ಭೇಟಿ ನೀಡಿದ್ದು, ಕುಟುಂಬದವರ ಜೊತೆ ಕಾಲ ಕಳೆದಿದ್ದಾರೆ. ಇದೀಗ ಜಯನಗರದ ಐಸ್ ಕ್ರೀಂ ಪಾರ್ಲರ್ ನಲ್ಲಿ ಕ್ವಾಲಿಟಿ ಟೈಂ ಕಳೆದಿದ್ದಾರೆ. ಬ್ರಿಟನ್ ಪ್ರಧಾನಿಯ ಪತ್ನಿ ಎಂಬ ಯಾವ ಹಮ್ಮು ಬಿಮ್ಮು ಎಂದು ಇಲ್ಲದೇ ಸಾಮಾನ್ಯ ಜನರಂತೇ ಐಸ್ ಕ್ರೀಂ ಸವಿಯಲು ಬಂದಿದ್ದರು. ಎಷ್ಟೇ ಶ್ರೀಮಂತರಾಗಿದ್ದರೂ ಅದನ್ನು ತೋರ್ಪಡಿಸಿಲ್ಲ. ಸೌಂದರ್ಯ, ಶ್ರೀಮಂತಿಕೆ ಮತ್ತು ಸರಳತೆ ಒಟ್ಟಿಗೇ ಇರುವುದು ಅಪರೂಪ ಎಂದು ಅವರನ್ನು ಪಾರ್ಲರ್ ನಲ್ಲಿ ನೋಡಿದ ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.

ಕಳೆದ ವಾರ ಅಕ್ಷತಾ ರಾವ್ ಚಿತ್ರ ಬ್ಯಾನರ್ಜಿ ಬರೆದ ಸುಧಾ ಮೂರ್ತಿ ಮತ್ತು ನಾರಾಯಣ ಮೂರ್ತಿಯವರ ಜೀವನ ಕುರಿತಾದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದರು. ಈ ಸಮಾರಂಭ ಸೈಂಟ್ ಜೊಸೆಫ್ ಕಾಲೇಜು ಬೆಂಗಳೂರಿನಲ್ಲಿ ನಡೆದಿತ್ತು. ಈ ವೇಳೆ ಸುಧಾಮೂರ್ತಿಯವರನ್ನು ಮೊದಲು ಭೇಟಿಯಾದ ಗಳಿಗೆಯನ್ನು ನಾರಾಯಣ ಮೂರ್ತಿ ನೆನೆಸಿಕೊಂಡಿದ್ದರು. ಈ ಕಾರ್ಯಕ್ರಮಕ್ಕೆ ನಾರಾಯಣ ಮೂರ್ತಿ ದಂಪತಿ ಜೊತೆ ಅಕ್ಷತಾ ರಾವ್ ಹಾಗೂ ಆಕೆಯ ಇಬ್ಬರು ಮಕ್ಕಳಾದ ಅನೌಷ್ಕಾ ಹಾಗೂ ಕೃಷ್ಣ ಮತ್ತು ಸಹೋದರ ರೋಹನ್ ಮೂರ್ತಿ ಕೂಡಾ ಬಂದಿದ್ದರು. ಸಮಾಜದಲ್ಲಿ ಎಷ್ಟೇ ಹೆಸರು ಮಾಡಿದ್ದರೂ ನಾರಾಯಣ ಮೂರ್ತಿ ಕುಟುಂಬ ಸಾಮಾನ್ಯರಂತೇ ಇರಲು ಬಯಸುತ್ತಾರೆ. ಅದಕ್ಕೆ ಲೇಟೆಸ್ಟ್ ಉದಾಹರಣೆ ಐಸ್ ಕ್ರೀಂ ಪಾರ್ಲರ್ ಫೋಟೋ ಎನ್ನಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ