ತಮಿಳುನಾಡು ಅಧಿವೇಶನದಲ್ಲಿ ಕೋಲಾಹಲ

geetha

ಸೋಮವಾರ, 12 ಫೆಬ್ರವರಿ 2024 (19:01 IST)
ಚೆನ್ನೈ :ಡಿಎಂಕೆ ಸರ್ಕಾರದ ಸಾಧನೆಗಳನ್ನು ಬಣ್ಣಿಸುವ ವಂದನಾ ನಿರ್ಣಯದ ಭಾಷಣ ಮಾಡಲು ತಮಿಳುನಾಡು ರಾಜ್ಯಪಾಲ ಆರ್‌.ಎನ್‌. ರವಿ ನಿರಾಕರಿಸಿದ್ದಾರೆ. ತಮಿಳಿನಲ್ಲಿದ್ದ ಭಾಷಣದ ಅನುವಾದವನ್ನು ರಾಜ್ಯಸರ್ಕಾರ ಇಂಗ್ಲಿಷ್‌ ಗೆ ಅನುವಾದಿಸಿ ಸಿದ್ದಪಡಿಸಿತ್ತು. ರಾಜ್ಯಸರ್ಕಾರದ ಸಾಧನೆಗಳು ಹಾಗೂ ಮುನ್ನೋಟಗಳ ಬಗ್ಗೆ ಭಾಷಣದಲ್ಲಿ ಉಲ್ಲೇಖಿಸಲಾಗಿತ್ತು. ಶಿಷ್ಟಾಚಾರದಂತೆ ಈ ಭಾಷಣವನ್ನು ರಾಜ್ಯಪಾಲರೇ ಓದಬೇಕಿತ್ತು. ಆದರೆ ರಾಜ್ಯಪಾಲರು ನಿರಾಕರಿಸಿದ ಕಾರಣ ಸ್ಪೀಕರ್‌ ಎಂ ಅಪ್ಪಾವು ಭಾಷಣವನ್ನು ಓದಿದ್ದಾರೆ. ಭಾಷಣ ಮುಗಿದ ಬಳಿಕ ರಾಷ್ಟ್ರಗೀತೆಗೂ ಸಹ ಕಾಯದೇ ರಾಜ್ಯಪಾಲರು ಅಧಿವೇಶನದಿಂದ ಹೊರಗೆ ನಿರ್ಗಮಿಸಿದ್ದಾರೆ. 

ರಾಜ್ಯಪಾಲರ ನಿರ್ಣಯ ಮತ್ತು ನಡವಳಿಕೆಯ ವಿರುದ್ದ ಡಿಎಂಕೆ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದೆ. ಇದೇ ಕಾರಣಕ್ಕೆ ಸಿಎಂ ಎಂ.ಕೆ. ಸ್ಟಾಲಿನ್‌ ಹಾಗೂ ರಾಜ್ಯಪಾಲ ಆರ್‌.ಎನ್‌. ರವಿ ನಡುವೆ ಶೀತಲ ಸಮರ ಮತ್ತೊಂದು ಹಂತ ಮುಟ್ಟಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಸ್ಪೀಕರ್‌ ಅಪ್ಪಾವು,  ವೈಯಕ್ತಿಕ ಅಭಿಪ್ರಾಯಗಳಿಗೆ ಸದನದಲ್ಲಿ ಸ್ಥಾನವಿಲ್ಲ. ಇದರ ಬದಲಾಗಿ ರಾಜ್ಯಪಾಲ ಆರ್‌.ಎನ್‌. ರವಿ ಅವರು 50 ಸಾವಿರ ಕೋಟಿ ರೂ. ನೆರೆ ಪರಿಹಾರ ನಿಧಿಯನ್ನು ಪ್ರಧಾನಿ ನಿಧಿಯಿಂದ ತರಲು ಪ್ರಯತ್ನಿಸಲಿ ಎಂದಿದ್ದಾರೆ.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ