ಚೀನಾ ಅಧ್ಯಕ್ಷರಿಗೆ ಬಾಡೂಟ ಮಾಡಿಸಿದ್ರಾ ನರೇಂದ್ರ ಮೋದಿ?

ಶನಿವಾರ, 12 ಅಕ್ಟೋಬರ್ 2019 (15:27 IST)
ಚೀನಾ ಅಧ್ಯಕ್ಷರಿಗೆ ಪ್ರಧಾನಿ ನರೇಂದ್ರ ಮೋದಿ ಬಾಡೂಟ ವ್ಯವಸ್ಥೆ ಕಲ್ಪಿಸಿರೋದಕ್ಕೆ ಆಕ್ರೋಶ ವ್ಯಕ್ತವಾಗಿದೆ.

ಭಾರತದ ಪ್ರಧಾನ ಮಂತ್ರಿ, ದೇಶದ ಸಂಸ್ಕೃತಿ ಬಗ್ಗೆ ಮಾತನಾಡುತ್ತಾರೆ. ಆದರೆ ಮಹಾಬಲಿಪುರಂನಲ್ಲಿ ಚೀನಾ ಪ್ರೆಸಿಡೆಂಟ್ ಅವರಿಗೆ ನೂರಾರು ವರ್ಷಗಳ ಇತಿಹಾಸ, ಸಂಪ್ರದಾಯ ಹೊಂದಿರೋ ಸ್ಥಳದಲ್ಲಿ ಬಾಡೂಟ ಮಾಡಿಸಿದ್ದು ಎಷ್ಟರಮಟ್ಟಿಗೆ ಸರಿ? ಹೀಗಂತ ಲೇಖಕ  ರಾಮ ಪುನಿಯಾನಿ ಪ್ರಶ್ನೆ ಮಾಡಿದ್ದಾರೆ.

ರಾಷ್ಟ್ರದಲ್ಲಿ ಧರ್ಮದ ಹೆಸರಿನಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ಭಾರತವನ್ನು ಹಿಂದೂ ರಾಷ್ಟ್ರವಾಗಿಸುತ್ತೇವೆಂದು ಹೇಳುವವರು ಪರದೇಶಿಯರ ಮನಸ್ಸು ಸೆಳೆಯಲು ಭಾರತದ ಸಂಸ್ಕೃತಿಯನ್ನು ಮರೆಮಾಚುತ್ತಿರೋದು ಎಷ್ಟರಮಟ್ಟಿಗೆ ಸಮಂಜಯ ಎಂದಿದ್ದಾರೆ.

ಭಾರತದ ಆರ್ಥಿಕತೆ ಕುಸಿಯುತ್ತಿದೆ. ಕೇಂದ್ರದ ಬಿಜೆಪಿ ಸರ್ಕಾರ ಖಾಸಗೀಕರಣ ಹೆಸರಿನಲ್ಲಿ ಆರ್ಥಿಕ ಕುಸಿತಕ್ಕೆ ಕಾರಣವಾಗಿದೆ. ರಾಷ್ಟ್ರದ ಅಭಿವೃದ್ಧಿಗೆ ಪ್ರತಿಯೊಬ್ಬರೂ ಶ್ರಮಿಸಬೇಕಿದೆ ಎಂದಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ