‘ಜಗತ್ತು ಮೆಚ್ಚಿಸಲು ಸುಳ್ಳು ಹೇಳಿದ ನರೇಂದ್ರ ಮೋದಿ’
ಭಾರತದಲ್ಲಿ ಯಾವುದೇ ಸಮಸ್ಯೆ ಇಲ್ಲ ಅಂತ ಮೋದಿ ಹೇಳಿಕೆ ನೀಡಿದ್ದಾರೆ. ಹೀಗಂತ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ಎಂ.ಪುಟ್ಟಮಾದು ಆರೋಪಿಸಿದ್ರು.
ಮಳವಳ್ಳಿ ಪಟ್ಟಣದ ಕೃಷಿ ಕೂಲಿಕಾರರ ಸಂಘದ ಕಚೇರಿಯಲ್ಲಿ ಮಾತನಾಡಿ, ಅಮೇರಿಕಾದಲ್ಲಿ ಹೌಡಿ ಮೋದಿ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ವಿಶ್ವಸಂಸ್ಥೆಯ ಭಾಷಣದಲ್ಲಿ ಭಾರತದಲ್ಲಿ ಯಾವುದೇ ಸಮಸ್ಯೆ ಇಲ್ಲ.
ಎಲ್ಲರೂ ಸುಭೀಕ್ಷೆಯಿಂದ ಇದ್ದಾರೆ ಎಂದು ಹೇಳಿದ್ದಾರೆ. ಇದು ನಿಜಕ್ಕೂ ಅಚ್ಚರಿ ಸಂಗತಿ. ಜಗತ್ತಿನಲ್ಲಿ ಹೆಚ್ಚು ಸಮಸ್ಯೆ ಇರುವುದು ಭಾರತದಲ್ಲೇ ಎನ್ನುವುದನ್ನು ಮೋದಿ ಮರೆತಿದ್ದಾರೆ.
ವಿಶ್ವಸಂಸ್ಥೆಯನ್ನು ಮೆಚ್ಚಿಸಲು ಮೋದಿ ಸುಳ್ಳು ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದ್ರು.