ನರೇಂದ್ರ ಮೋದಿ ಪ್ರಧಾನಿಯಾಗಲು ನಾಲಾಯಕ್: ವಾಟಾಳ್

ಬುಧವಾರ, 9 ಮೇ 2018 (18:40 IST)
ನರೇಂದ್ರ ಮೋದಿ ಈ ದೇಶದ ಪ್ರಧಾನಿಯಾಗಲು ಲಾಯಕ್ಕಿಲ್ಲ. ಅವರೊಬ್ಬ ಚಾಮರಾಜನಗರದ ಗ್ರಾಮ ಪಂಚಾಯ್ತಿ ಅಧ್ಯಕ್ಷರಿದ್ದಂಗೆ ಎಂದು ಕನ್ನಡ ಚಳವಳಿ ನಾಯಕ, ಮಾಜಿ ಶಾಸಕ ವಾಟಾಳ್ ನಾಗರಾಜ್ ಟೀಕಿಸಿದ್ರು.
ಚಾಮರಾಜನಗರದಲ್ಲಿಂದು ಹಮ್ಮಿಕೊಂಡಿದ್ದ ಕನ್ನಡ ಚಳವಳಿ ವಾಟಾಳ್ ಪಕ್ಷದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ವಾಟಾಳ್ ನಾಗರಾಜ್, ಪ್ರಧಾನಿ ಮೋದಿಯವ್ರು ಮಾತಿಗೆ ನಿಂತ್ರೆ ಬೀದಿಯಲ್ಲಿ ಜಗಳವಾಡುವ ಜನರಂತೆ ಮಾತಾಡ್ತಾರೆ. ಅವ್ರು ಪ್ರಧಾನಿಯಾಗಲು ನಾಲಾಯಕ್. ಚಾಮರಾಜನಗರದ ಗ್ರಾಮ ಪಂಚಾಯ್ತಿ ಅಧ್ಯಕ್ಷರಿದ್ದಂಗೆ, ಮೋದಿ ಮತ್ತು ರಾಹುಲ್ ಗಾಂಧಿ ಬಂದು ಹಿಂದಿಯಲ್ಲಿ ಮಾತಾಡಿಬಿಟ್ರೆ ಓಟು ಹಾಕ್ಬೇಕಾ ಎಂದು ಗುಡುಗಿದ್ರು.
 
ಕರ್ನಾಟಕದಲ್ಲಿರುವ 224 ಶಾಸಕರಿಗೆ ನಾನೊಬ್ಬ ಸಮ. ನನಗೆ ಯಾವುದೇ ಜಾತಿಯಿಲ್ಲ. ನನ್ನದು ಕನ್ನಡ ಜಾತಿ. ನನ್ನನ್ನು ಚಾಮರಾಜನಗರದ ಜನತೆ ಗೆಲ್ಲಿಸಿದ್ರೆ ಕಬಿನಿ ಎರಡನೇ ಹಂತ ತರಲು ಶ್ರಮಿಸ್ತೇನೆ ಎಂದು ಭರವಸೆ ನೀಡಿದ್ರು. 
 
ಸಮಾವೇಶದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದ್, ವಾಟಾಳ್ ಪುತ್ರಿ ಅನುಪಮಾ ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿದ್ರು. ಸಮಾವೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಜಮಾಯಿಸಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ