ಮೋದಿ ಆಡಳಿತ ಜನರಿಗೆ ಗೊತ್ತಾಗಿದೆ ಎಂದ ಸಚಿವ!
ಕಳೆದ ಬಾರಿ ಮೋದಿ ಚಹಾ ಮಾರಿ ಬಂದ್ದವನು. ಅವರಿಗೆ ಬಡವರ ಕಷ್ಟ ಗೊತ್ತಿರುತ್ತದೆ ಅಂತಾ ಆಯ್ಕೆ ಮಾಡಿದ್ದರು. ಆದರೆ ಈಗ ಜನರಿಗೆ ಸತ್ಯ ಗೊತ್ತಾಗಿದೆ ಎಂದು ಸಚಿವ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದು ಏನು ಕೆಲಸ ಮಾಡಿದ್ದಾರೆ ಅಂತಾ ಜನರಿಗೆ ಗೊತ್ತಾಗಿದೆ. ಹೀಗಾಗಿ ಬರಲಿರುವ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಪಕ್ಷವನ್ನು ಕೈ ಹಿಡಿಯಲಿದ್ದಾರೆ. ಹೀಗಂತ ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ.
ಲೋಕಸಭಾ ಚುನಾವಣೆ ವಿಚಾರ ಕುರಿತು ಹಾವೇರಿಯಲ್ಲಿ ಸಚಿವ ಜಮೀರ ಅಹಮದ್ ಪ್ರತಿಕ್ರಿಯೆ ನೀಡಿದ್ದು, ಕಳೆದ ಬಾರಿ ಚುನಾವಣೆಯಲ್ಲಿ ಹಾವೇರಿಯಲ್ಲಿ ಅಲ್ಪ ಮತಗಳ ಅಂತರದಿಂದ ಸೋತಿದ್ದೇವೆ. ಈ ಬಾರಿ ಚುನಾವಣೆಯಲ್ಲಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡ ಚುನಾವಣೆ ಎದುರಿಸಲಿವೆ ಎಂದು
ಹಾವೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಹೇಳಿಕೆ ನೀಡಿದ್ದಾರೆ.