ಪ್ರಧಾನಿ ನರೇಂದ್ರ ಮೋದಿಯವರು ಚಹಾ ಮಾರಿಲ್ಲ- ಪ್ರವೀಣ್ ತೂಗಾಡಿಯಾ ಸ್ಪಷ್ಟನೆ

ಬುಧವಾರ, 23 ಜನವರಿ 2019 (09:08 IST)
ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರು ಚಹಾ ಮಾರಿಲ್ಲ. ಪ್ರಚಾರಕ್ಕಾಗಿ ಬಿಜೆಪಿ ಹೀಗೆ ಹೇಳುತ್ತಿದ್ದಾರೆ ಎಂದು ರಾಷ್ಟ್ರೀಯ ಹಿಂದೂ ಪರಿಷತ್ ಅಧ್ಯಕ್ಷ ಪ್ರವೀಣ್ ತೂಗಾಡಿಯಾ ಹೇಳಿದ್ದಾರೆ.


ಕೇಂದ್ರ ಸರ್ಕಾರವನ್ನು ಟೀಕಿಸುತ್ತಾ ಬಂದಿರುವ ಪ್ರವೀಣ್ ತೊಗಡಿಯಾ ಅವರು,’ ಪ್ರಧಾನಿ ಮೋದಿ ಅವರನ್ನು 43 ವರ್ಷಗಳಿಂದ ಬಲ್ಲೆ, ಇಷ್ಟು ವರ್ಷದಲ್ಲಿ ಒಮ್ಮೆಯೂ ಮೋದಿ ಅವರು ಚಹಾ ಮಾರಿರವುದನ್ನು ನೋಡಿಲ್ಲ. ಪ್ರಚಾರಕ್ಕಾಗಿ ಪ್ರಧಾನಿ ಚಹಾ ಮಾರುತ್ತಿದ್ದರು ಎಂಬ ಅಸ್ತ್ರವನ್ನು ಬಿಜೆಪಿ ಬಳಸುತ್ತಿದೆ ಎಂದು ಆರೋಪಿಸಿದ್ದಾರೆ.


ನಾನೊಬ್ಬ ವೈದ್ಯನಾಗಿದ್ದು, ಪರಿಚಯಸ್ಥರಲ್ಲಿ ಈ ಬಗ್ಗೆ ವಿಚಾರಿಸಿದರೆ ಯಾರ ಬಳಿಯೂ ಸ್ಪಷ್ಟವಾದ ಉತ್ತರವಿಲ್ಲ. ಮೋದಿ ಚಹಾ ಮಾರಿರುವುದನ್ನು ಇದೂವರೆಗೂ ಯಾರೂ ಸಾಬೀತು ಮಾಡಿಲ್ಲ ಎಂದು ಪ್ರವೀಣ್ ತೊಗಡಿಯಾ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ