ಗಡಿ ಜಿಲ್ಲೆಯಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಡಿ.8ರಂದು

ಗುರುವಾರ, 22 ನವೆಂಬರ್ 2018 (19:58 IST)
ಗಡಿ ಜಿಲ್ಲೆಯಲ್ಲಿ ಡಿಸೆಂಬರ್ 8 ರಂದು ರಾಷ್ಟ್ರೀಯ ಲೋಕ್ ಅದಾಲತ್ ಹಮ್ಮಿ ಕೊಳ್ಳಲಾಗಿದ್ದು,  ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಜಿಲ್ಲಾ ನ್ಯಾಯಾಧೀಶರು ಹೇಳಿದ್ದಾರೆ.

ಚಾಮರಾಜನಗರ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಡಿ.ಜೆ. ಬಸವರಾಜು, ಜಿಲ್ಲಾ ನ್ಯಾಯಧೀಶ ಬಸವರಾಜ  ಮಾತನಾಡಿದರು. ಡಿಸೆಂಬರ್ 8 ರಂದು ಕಕ್ಷಿದಾರರು ನೇರವಾಗಿ ಜನತಾ ನ್ಯಾಯಾಲಯದಲ್ಲಿ ತಮ್ಮ ವ್ಯಾಜ್ಯಗಳನ್ನ  ಬಗೆಹರಿಸಿಕೊಳ್ಳಬಹುದೆಂದರು.

ಜಿಲ್ಲೆಯಲ್ಲಿದ್ದ  2827 ಪ್ರಕರಣಗಳಲ್ಲಿ  ಲೋಕ್ ಅದಾಲತ್ ಮೂಲಕ 338 ಪ್ರಕರಣಗಳನ್ನು 
ಇತ್ಯರ್ಥಪಡಿಸಲಾಗಿದೆ ಎಂದರು.

ಅಕ್ಟೋಬರ್ 31 ವರಗೆ ದಾಖಲಾಗಿರುವ 8769 ಸಿವಿಲ್ ಹಾಗೂ 8629 ಕ್ರಿಮಿನಲ್ ಪ್ರಕರಣಗಳನ್ನ ಲೋಕ್ ಅದಾಲತ್ ಮೂಲಕ ಇತ್ಯರ್ಥ ಪಡಿಸಲು ಪ್ರಯತ್ನಿಸಲಾಗುವುದೆಂದು ಬಸವರಾಜು ವಿವರಿಸಿದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ