ಶಬರಿಮಲೆಯಲ್ಲಿ ಪೊಲೀಸರ ದರ್ಬಾರಿಗೆ ಕೇರಳ ಸರ್ಕಾರಕ್ಕೆ ತಪರಾಕಿ ನೀಡಿದ ಹೈಕೋರ್ಟ್
ಮಂಗಳವಾರ, 20 ನವೆಂಬರ್ 2018 (09:00 IST)
ತಿರುವನಂತಪುರಂ: ಸುಪ್ರೀಂಕೋರ್ಟ್ 10 ರಿಂದ 50 ವರ್ಷದೊಳಗಿನ ಮಹಿಳೆಯರಿಗೆ ಶಬರಿಮಲೆ ದೇವಾಲಯದಲ್ಲಿ ಪ್ರವೇಶಕ್ಕೆ ಅವಕಾಶ ನೀಡಿದ ಮೇಲೆ ನಡೆಯುತ್ತಿರುವ ಪ್ರತಿಭಟನೆ ಹತ್ತಿಕ್ಕಲು ಪೊಲೀಸರ ಸರ್ಪಗಾವಲನ್ನೇ ನೇಮಿಸಲಾಗಿದೆ.
ಶಬರಿಮಲೆಯಲ್ಲಿ ಈಗ ಭಕ್ತರಿಗಿಂತ ಹೆಚ್ಚು ಪೊಲೀಸರೇ ನಿಯೋಜನೆಗೊಂಡಿರುವುದರ ಬಗ್ಗೆ ಕೇರಳ ಹೈಕೋರ್ಟ್ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಭಕ್ತರನ್ನು ನಿಯಂತ್ರಿಸಲು 15 ಸಾವಿರ ಪೊಲೀಸರ ಅವಶ್ಯಕತೆಯಿದೆಯೇ? ಸುಪ್ರೀಂ ತೀರ್ಪಿನ ಹೆಸರಿನಲ್ಲಿ ಪೊಲೀಸರು ಭಕ್ತರ ಮೇಲೆ ಈ ರೀತಿ ದಬ್ಬಾಳಿಕೆ ಮಾಡಲು ಹೇಗೆ ಸಾಧ್ಯ? ಎಂದು ಹೈಕೋರ್ಟ್ ಪ್ರಶ್ನಿಸಿದೆ.
ಅಷ್ಟೇ ಅಲ್ಲದೆ, ಈ ವಿಚಾರವಾಗಿ ರಾಜ್ಯದ ಕಾನೂನು ಸುವ್ಯವಸ್ಥೆ ಪಾಲಕ ಅಧಿಕಾರಿಗಳು ತನ್ನ ಮುಂದೆ ಹಾಜರಾಗಿ ವಿವರಣೆ ನೀಡಬೇಕೆಂದು ಆದೇಶಿಸಿದೆ. ಅಷ್ಟೇ ಅಲ್ಲದೆ, ಶಬರಿಮಲೆಯಲ್ಲಿ ಭಕ್ತರಿಗೆ ಸಾಮಾನ್ಯ ಸೌಲಭ್ಯವೂ ಒದಗಿಸಿರದ ಬಗ್ಗೆಯೂ ಕೋರ್ಟ್ ಪ್ರಶ್ನೆ ಮಾಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.