ನವರಸನಾಯಕ ಜಗ್ಗೇಶ್ ಗು ತಟ್ಟಿದ ಅಕಾಲಿಕ ಮಳೆ ಅವಾಂತರ

ಸೋಮವಾರ, 22 ಮೇ 2023 (14:06 IST)
ನಿನ್ನೆ ಸುರಿದ ಅಕಾಲಿಕ ಮಳೆಯಿಂದಾಗಿ ಜಗ್ಗೇಶ್ ಕಾರು ಮುಳುಗಡೆಯಾಗಿದೆ.ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರ ಬಿಎಂಡಬ್ಯೂ ಕಾರು ನೀರಿನಲ್ಲಿ ಮುಳುಗಡೆಯಾಗಿದ್ದು,ಸ್ನೇಹಿತನ ಮನೆಯ ಸೆಲ್ಲರ್ ನಲ್ಲಿ ನಿಲ್ಲಿಸಿದ ಬಿಎಂಡಬ್ಯೂ ಕಾರನ್ನ ನಿಲ್ಲಿಸಲಾಗಿತ್ತು.ತಮ್ಮ ಮನೆಯ ರಿಪೇರಿ ಕಾರ್ಯ ಹಿನ್ನಲೆಯಲ್ಲಿ ಸ್ನೇಹಿತನ ಮನೆಯಲ್ಲಿ ಮನೆಯ ಸೆಲ್ಲರ್ ನಲ್ಲಿ ಜಗ್ಗೇಶ್ ಕಾರು ನಿಲ್ಲಿಸಿದ್ರು.
 
ಸ್ನೇಹಿತ ಮುರಳಿ ಎಂಬುವರ ಮನೆಯ ಸೆಲ್ಲರ್ ನಲ್ಲಿ ಕಾರು ನಿಲ್ಲಿಸಿದ್ದು,ಜಗ್ಗೇಶ್ ಸ್ನೇಹಿತನ ಮನೆಗೂ ಅಕಾಲಿಕ ಮಳೆ ನೀರು ನುಗ್ಗಿದೆ.ಮಳೆ ನೀರು ನುಗ್ಗಿ ಜಗ್ಗೇಶ್ ಕಾರು ನೀರಿನಲ್ಲಿ ಮುಳುಗಡೆಯಾಗಿದೆ.ಬಳಿಕ 5 ಹೆಚ್ ಪಿ ಮೋಟಾರ್ ಬಳಸಿ ನೀರು ಹೊರ ಹಾಕುವ ಕೆಲಸ ಮಾಡಲಾಗಿದೆ.ಅಲ್ಲದೇ ಮೇ ತಿಂಗಳಲ್ಲಿ ಸುರಿದ ಅಲ್ಲಿಕಲ್ಲಿನ ಮಳೆ ಬಗ್ಗೆ ನಟ ಜಗ್ಗೇಶ್  ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.ಮಳೆ ನೀರಿನಲ್ಲಿ ಕಾರು ಮುಳುಗಡೆ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ  ಜಗ್ಗೇಶ್ ಹಂಚಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ