ಮಾಜಿ ಸಿಎಂ ಬಿಎಸ್ ವೈ ಮನೆ ಬಳಿ ಭೀಕರ ಅಪಘಾತ: ಮಹಿಳೆ ಆಸ್ಪತ್ರೆಗೆ
ಕುಡಿದ ಮತ್ತಿನಲ್ಲಿ ಯುವಕರು ಚಲಾಯಿ
ಸುತ್ತಿದ್ದ ಕಾರು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನಿವಾಸದ ಬಳಿ ದಂಪತಿ ಪ್ರಯಾಣಿಸುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದ ಘಟನೆ ಬೆಂಗಳೂರಿನಲ್ಲಿ ಸಂಭವಿಸಿದೆ.
ಕಾರಿನಲ್ಲಿ ಇದ್ದ ಇಬ್ಬರು ಯುವಕರು ಕುಡಿದು ವಾಹನ ಚಲಾಯಿಸುವ ಮೂಲಕ ಅವಾಂತರ ಸೃಷ್ಟಿಸಿದ್ದು, ಬೈಕ್ ನಲ್ಲಿದ್ದ ಪತ್ನಿ ತೀವ್ರವಾಗಿ ಗಾಯಗೊಂಡಿದ್ದು, ಪತಿ ಹಾಗೂ ಮಗು ಪಾರಾಗಿದ್ದಾರೆ ಎನ್ನಲಾಗಿದೆ.
ದ್ವಿಚಕ್ರ ವಾಹನದಲ್ಲಿ ಚಲಾಯಿಸುತ್ತಿದ್ದ ಕುಟುಂಬದ ಮೇಲೆ ಕಾರು ಹರಿದಿದ್ದು, ನಂತರ ಪೊಲೀಸ್ ಚೌಕಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಪತ್ನಿಗೆ ಕಾಲು ಮುರಿದಿದೆ ಎನ್ನಲಾಗಿದೆ. ಮಗು, ಅಪ್ಪ ಆರೋಗ್ಯವಾಗಿದೆ ಎನ್ನಲಾಗಿದೆ.