ಕೆಇಬಿ ಅಧಿಕಾರಿಗಳ ನಿರ್ಲಕ್ಷ್ಯ: ನೀರು ಕಾಣದ ಬೆಳೆ

ಬುಧವಾರ, 8 ಆಗಸ್ಟ್ 2018 (18:34 IST)
ಗಡಿ ಭಾಗದ ಜಿಲ್ಲೆಯ ರೈತರಿಗೆ ಶಾಕ್ ನೀಡುತ್ತಿರುವ ವಿದ್ಯುತ್ ಇಲಾಖೆಯಿಂದ ಹೈರಾಣಾಗುತ್ತಿದ್ದಾರೆ.
ಕೆಇಬಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ರಾಯಚೂರು ಜಿಲ್ಲೆಯಲ್ಲಿ ಬೆಳೆಗಳು ಬಾಡುತ್ತಿವೆ.

ಕೈಗೆ ಬಂದ ತುತ್ತು ಬೆಳೆಗಾರರಿಗೆ ಬರದಂತೆ ಆಗಿದೆ. ಸಮರ್ಪಕ ಕರೆಂಟ್ ದೊರೆಯದೆ ಬಾಡುತ್ತಿರುವ ಬೆಳೆಗಳಿಂದ ಅನ್ನದಾತ ಕಂಗಾಲಾಗಿದ್ದಾನೆ. ತೋಟದಲ್ಲಿ ಬೆಳೆದ ಬೆಳೆಗಳಿಗೆ ನೀರುಣಿಸಲಾಗದೆ ಪರದಾಡುತ್ತಿರುವ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಕನಿಷ್ಠ 350-450 ವೊಲ್ಟೇಜ್ ಬೇಕಿರುವ ಬೋರ್ವೆಲ್ ಗಳಿಗೆ ಕನಿಷ್ಠ ಮಟ್ಟದಲ್ಲಿ ದೊರೆಯದ ಕರೆಂಟ್ ಕಂಗಾಲಾಗುವಂತೆ ಮಾಡಿದೆ.

ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಹೋಬಳಿಯಲ್ಲಿ 220 ವೊಲ್ಟೇಜ್ ವಿದ್ಯುತ್ ಗೂ ಪರದಾಡುವಂತಾಗಿದೆ.
ವಾರಕ್ಕೆ ಎರಡು ಬಾರಿ ನೀರುಣಿಸಬೇಕಾದ ಬೆಳೆಗಳಿಗೆ ತಿಂಗಳಿಗೊಮ್ಮೆ ನೀರುಣಿಸಲಾಗದೆ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ