ನಂದು ಸ್ಕೂಲಲ್ಲಿ ಒಂದೂವರೆ ಲಕ್ಷ ಫೀಸ್ ಎಂದ ಡಿಕೆ ಶಿವಕುಮಾರ್ ಗೆ ಉಚಿತ ಭಾಗ್ಯ ಇಲ್ಲೂ ಕೊಡಿ ಎಂದ ನೆಟ್ಟಿಗರು

Krishnaveni K

ಸೋಮವಾರ, 10 ಮಾರ್ಚ್ 2025 (10:03 IST)
ಬೆಂಗಳೂರು: ಮಂಡ್ಯದಲ್ಲಿ ಶಾಲೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾದ ಡಿಕೆ ಶಿವಕುಮಾರ್ ನಿನ್ನೆ ನಂದು ಬೆಂಗಳೂರಲ್ಲಿ ಸ್ಕೂಲ್ ಇದೆ. ಒಂದೂವರೆ ಲಕ್ಷ ಫೀಸ್ ಎಂದಿದ್ದರು. ಇದಕ್ಕೀಗ ನೆಟ್ಟಿಗರು ಸಾಕಷ್ಟು ಕಾಮೆಂಟ್ ಮಾಡಿದ್ದು ಇಲ್ಲೂ ಉಚಿತ ಭಾಗ್ಯ ಕೊಡಿ ಎಂದಿದ್ದಾರೆ.

ಮಂಡ್ಯದಲ್ಲಿ ಶೆಟ್ಟಿಹಳ್ಳಿ ಶಾಲೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾದ ಡಿಕೆ ಶಿವಕುಮಾರ್, ಮಂಡ್ಯದಲ್ಲಿ ಶಿಕ್ಷಣ ವ್ಯವಸ್ಥೆ ಕುಸಿದಿದೆ. ಅದನ್ನು ಮೇಲಕ್ಕೆತ್ತುವ ಪ್ರಯತ್ನ ಮಾಡಬೇಕು ಎಂದ ಡಿಕೆ ಶಿವಕುಮಾರ್ ಮಂಡ್ಯ ಮತ್ತು ಬೆಂಗಳೂರು ಶಾಲೆಗಳ ಫೀಸ್ ಕಂಪೇರ್ ಮಾಡಿ ಮಾತನಾಡಿದ್ದಾರೆ.

ಈ ವೇಳೆ ನಂದೂ ಒಂದು ಬೆಂಗಳೂರಿನಲ್ಲಿ ಶಾಲೆಯಿದೆ. ಇಲ್ಲಿ ಒಂದೂವರೆ ಲಕ್ಷ ಫೀಸ್ ಎಂದಿದ್ದಾರೆ. ಅವರ ಈ ಮಾತಿಗೆ ನೆಟ್ಟಿಗರು ಸಖತ್ ಕೌಂಟರ್ ಕೊಟ್ಟಿದ್ದಾರೆ. ನಿಮ್ಮ ಶಾಲೆಯಲ್ಲೂ ಬಡವರ ಮಕ್ಕಳಿಗೆ ಉಚಿತ ಸೀಟ್ ಕೊಡಿ ಎಂದಿದ್ದಾರೆ.

ಇಲ್ಲೂ ಉಚಿತ ಭಾಗ್ಯ ಕೊಡಿ. ಆಗ ಎಷ್ಟೋ ವಿದ್ಯಾರ್ಥಿಗಳು ನಿಮ್ಮ ಹೆಸರು ಹೇಳಿಕೊಂಡು ಬದುಕುತ್ತಾರೆ. ಬೆಂಗಳೂರು ಮಾತ್ರವಲ್ಲ, ಪ್ರತೀ ಜಿಲ್ಲೆಗೂ ಶಾಲೆ ಸ್ಥಾಪಿಸಿ ಆ ಮೂಲಕ ಬಡ ಜನರಿಗೆ ನೆರವಾಗಿ ಎಂದಿದ್ದಾರೆ. ಇನ್ನು ಕೆಲವರು ಅದಕ್ಕೇ ಸರ್ಕಾರೀ ಶಾಲೆಗಳು ಮುಚ್ಚುತ್ತಿರುವುದು. ನಿಮ್ಮಂತಹ ರಾಜಕಾರಣಿಗಳು ಪ್ರೈವೇಟ್ ಸ್ಕೂಲ್ ತೆರೆದರೆ ಹೇಗೆ? ಕನ್ನಡ ಶಾಲೆಗಳಲ್ಲಿ ಉತ್ತಮ ವಿದ್ಯಾಭ್ಯಾಸ ಕೊಡಿ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ