ಮಂಡ್ಯ ಬಳಿಕ ಗದಗದಲ್ಲಿ ಅಪ್ರಾಪ್ತೆ ಮೇಲೆ ರೇಪ್: ಆರೋಪಿ ಸುಲೇಮಾನ್, ಅಲ್ತಾಫ್ ಅರೆಸ್ಟ್
ಈ ಕೃತ್ಯ ಡಿಸೆಂಬರ್ ನಲ್ಲೇ ನಡೆದಿತ್ತು. ಆದರೆ ಈಗಷ್ಟೇ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಸುಲೇಮಾನ್ ರೇಪ್ ಮಾಡಿದ್ದು ಇದನ್ನು ಅಲ್ತಾಫ್ ವಿಡಿಯೋ ಮಾಡಿಟ್ಟುಕೊಂಡಿದ್ದ ಎನ್ನಲಾಗಿದೆ. ಇದೀಗ ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದೆ.
ಮಗಳ ಮೇಲೆ ಅತ್ಯಾಚಾರವಾದ ಘಟನೆ ತಿಳಿದುಬರುತ್ತಲೇ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ನರೇಗಲ್ ಪೊಲೀಸರು ಕಾಮುಕ ಸುಲೇಮಾನ್ ಮತ್ತು ಅಲ್ತಾಫ್ ನನ್ನು ತೀವ್ರ ವಿಚಾರಣೆಗೊಳಪಡಿಸುತ್ತಿದ್ದಾರೆ.
ಮಂಡ್ಯದಲ್ಲೂ ಇಂತಹದ್ದೇ ಘಟನೆ ಬೆಳಕಿಗೆ ಬಂದಿತ್ತು. 8 ವರ್ಷದ ಬಾಲಕಿ ಮೇಲೆ ಮೂವರು ಕಾಮುಕರು ಅತ್ಯಾಚಾರವೆಸಗಿದ್ದರು. ಬಾಲಕಿ ತೀವ್ರ ಹೊಟ್ಟೆನೋವು ಮತ್ತು ರಕ್ತಸ್ರಾವದಿಂದ ಬಳಲುತ್ತಿದ್ದರಿಂದ ಪೋಷಕರು ಆಸ್ಪತ್ರೆಗೆ ಕರೆದೊಯ್ದಾಗ ಘಟನೆ ಬೆಳಕಿಗೆ ಬಂದಿತ್ತು.