ಪೋಲಿಯೊ ಹೊಸ ತಳಿ ಪತ್ತೆ: 10 ವರ್ಷ ನಂತರ ವಾಪಸ್!

ಬುಧವಾರ, 15 ಜೂನ್ 2022 (21:01 IST)
ನಾಪತ್ತೆಯಾಗಿದ್ದ ಪೋಲಿಯೋ ವೈರಸ್ 10 ವರ್ಷಗಳ ನಂತರ ದೇಶದಲ್ಲಿ ಮೊದಲ ಬಾರಿ ಪತ್ತೆಯಾಗಿದೆ. 
ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತಾದಲ್ಲಿ ಪೋಲಿಯೋ ವೈರಸ್ ಪತ್ತೆಯಾಗಿದೆ. ಈ ಮೂಲಕ ಪೋಲಿಯೊ ಮುಕ್ತ ಭಾರತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ದೇಶದಲ್ಲಿ ಮತ್ತೆ ಪೋಲಿಯೊ ಮರಳಿದೆ.
ವಿಶ್ವ ಆರೋಗ್ಯ ಸಂಸ್ಥೆಯು ಮಾರ್ಚ್ 27 2014ರಲ್ಲಿ ಭಾರತವನ್ನು ಪೋಲಿಯೋ ವೈರಸ್ ಮುಕ್ತ ದೇಶ ಎಂದು ಘೋಷಣೆ ಮಾಡಿತ್ತು. ಆದರೆ ಇದೀಗ ಎಂಟು ವರ್ಷಗಳ ನಂತರ ಕೊಲ್ಕತ್ತಾ ನಗರದಲ್ಲಿ ಪೋಲಿಯೋ ವೈರಸ್ ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.
ಹೌದು ಕೊಲ್ಕತ್ತಾ ನಗರದ ಮೆತಿಯಾಬುರೂಜ್ ಪ್ರದೇಶದಲ್ಲಿ ಕೊಳಚೆ ನೀರಿನಲ್ಲಿ ಪೋಲಿಯೋ ರೋಗಾಣುಗಳು ಕೊರತೆಯಾಗಿದ್ದು, ಈ ಪ್ರದೇಶದಲ್ಲಿ ಹೆಚ್ಚು ನಿಗಾವಹಿಸಲಾಗಿದೆ ಮತ್ತು ರಾಜ್ಯದ ಎಲ್ಲ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳಲ್ಲಿ ಎಚ್ಚರಿಕೆ ನೀಡಲಾಗಿದೆ. 
ಪೋಲಿಯೋ ವೈರಸ್ ಪತ್ತೆಯಾದರೆ ಪ್ರದೇಶದಲ್ಲಿ ಮಲ ವಿಸರ್ಜನೆ ಮಾಡಬಾರದು ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳ ಮೇಲೆ ಹೆಚ್ಚು ನಿಗಾ ವಹಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ