ಹೀಗೇ ಆದ್ರೆ ಮತ್ತೆ ಲಾಕ್ ಡೌನ್ ನಿಯಮಗಳು ಗ್ಯಾರಂಟಿ

ಭಾನುವಾರ, 21 ಫೆಬ್ರವರಿ 2021 (09:12 IST)
ಬೆಂಗಳೂರು: ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಕಾರಣ, ರಾಜ್ಯದಲ್ಲೂ ಆತಂಕ ಮನೆ ಮಾಡಿದೆ.

 

ಈಗಾಗಲೇ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಹಾಗಿದ್ದರೂ ಪರಿಸ್ಥಿತಿ ಕೈ ಮೀರಿ ಹೋಗುವ ಪರಿಸ್ಥಿತಿ ಇದ್ದರೆ ಮತ್ತೆ ಹಿಂದಿನ ಲಾಕ್ ಡೌನ್ ನಿಯಮಗಳು ಜಾರಿಗೆ ಬಂದರೂ ಅಚ್ಚರಿಯಾಗಬೇಕಿಲ್ಲ. ಮದುವೆ, ಸಮಾರಂಭಗಳಿಗೆ, ಜನ ಎಲ್ಲೆಂದರಲ್ಲಿ ಓಡಾಡುವುದಕ್ಕೆ ಬ್ರೇಕ್ ಬೀಳುವ ಸಾ‍ಧ‍್ಯತೆಯಿದೆ. ನೈಟ್ ಕರ್ಫ್ಯೂ ಜಾರಿ, ಲಾಕ್ ಡೌನ್ ನಿಯಮ ಕುರಿತಂತೆ ಸದ್ಯದಲ್ಲೇ ಸಿಎಂ ಜೊತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಸಚಿವ ಸುಧಾಕರ್ ಈಗಾಗಲೇ ಹೇಳಿದ್ದಾರೆ. ಹೀಗಾಗಿ ನಮ್ಮ ಎಚ್ಚರಿಕೆಯಲ್ಲಿ ನಾವಿದ್ದರೆ ಉತ್ತಮ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ