ಟ್ರಾಫಿಕ್ ಅಂದ್ರೆ ಸಿಲಿಕಾನ್ ಸಿಟಿ ಜನರಿಗೆ ದೊಡ್ಡ ತಲೆನೋವಾಗಿದೆ. ಸಂಚಾರಿ ಪೊಲೀಸರು ಸಹ ವಾಹನ ದಟ್ಟಣೆಗೆ ಕಡಿವಾಣ ಹಾಕಲು ಹರಸಾಹಸ ಮಾಡ್ತಿದ್ದಾರೆ. ಆದ್ರೆ ಇದೀಗ ಸರ್ಕಾರ KRDCL ಮುಖಾಂತರ ಸಿಟಿಯ 20% ಟ್ರಾಫಿಕ್ ಕಂಟ್ರೋಲ್ ಗೆ ನೂತನ ಯೋಜನೆಗೆ ಮುಂದಾಗಿದೆ.ಸಿಲಿಕಾನ್ ಸಿಟಿ ಅಂದ್ರೆ ತಟ್ಟ್ ಅಂತ ನೆನಪಾಗೋದು ಟ್ರಾಫಿಕ್ ಜಾಮ್. ಯಾರಪ್ಪ ಈ ಟ್ರಾಫಿನಲ್ಲಿ ಪ್ರಯಾಣ ಮಾಡ್ತರೆ ಅನ್ನೋದು ಇಲ್ಲಿ ಬಹುತೇಕ ಮಂದಿಯ ಚಿಂತೆ. ಈ ನಿಟ್ಟಿನಲ್ಲಿ ಟ್ರಾಫಿಕ್ ಜಾಮ್ ಕಂಟ್ರೋಲ್ ಮಾಡೋಕೆ ಅಂತ ಒಂದಿಲ್ಲಾ ಒಂದು ರೀತಿಯಲ್ಲಿ ಸರ್ಕಸ್ಸ್ ಮಾಡುತ್ತೆ. ಅದರಂತೆ ಇದೀಗ ಸರ್ಕಾರ ಮತ್ತೊಂದು ಹೊಸ ಯೋಜನೆಗೆ ಕೈ ಹಾಕಿದೆ. ಬೆಂಗಳೂರಿನ ಸುತ್ತಮುತ್ತಲಿನ 154 ಕಿ.ಮೀ. ಉದ್ದದ ರಸ್ತೆ ಅಭಿವೃದ್ಧಿ ಕಾರ್ಯ ಮಾಡೋದು. ಸಿಟಿ ಔಟ್ ಸ್ಕರ್ಟ್ ನಿಂದ ನೇರವಾಗಿ ಏರ್ ಪೋರ್ಟ್ ಗೆ ಸಂಪರ್ಕ ಕಲ್ಪೀಸೋದು.ಹೌದು ಮೈಸೂರು, ತುಮಕೂರು, ಹಾಸನ, ಆನೇಕಲ್, ಸೇರಿದಂತೆ ರಾಜ್ಯದ ವಿವಿಧ ಭಾಗದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲು ಅನಿವಾರ್ಯವಾಗಿ ನಗರ ಪ್ರದೇಶಿಸಬೇಕಿತ್ತು. ಇನ್ಮುಂದೆ ಹೊರಗಿನಿಂದ ಬಂದ ವಾಹನಗಳು ಏರ್ಪೋರ್ಟ್ಗೆ ಹೋಗಲು ನಗರ ಪ್ರವೇಶಿಸುವ ಅಗತ್ಯವೇ ಇಲ್ಲ. ಹೀಗಾಗಿ ನಗರದೊಳಗೆ ಟ್ರಾಫಿಕ್ ಸಮಸ್ಯೆ ಕಡಿವಾಣ ಹಾಕಬುದಾಗಿದೆ. ರಾಜ್ಯ ಸರ್ಕಾರ KRDCL ಮೂಲಕ 154 ಕಿ.ಮೀ. ಉದ್ದದ ಸಪೋರ್ಟಿಂಗ್ ರಸ್ತೆಗಳ ನಿರ್ಮಾಣ ಮಾಡ್ತಿದೆ. KRDCL ಸುಮಾರು 2 ಸಾವಿರ ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯ ಆರಂಭವಾಗಿದೆ. ಈ ಹೊಸ ಯೋಜನೆಗೆ ಸುಮಾರು 72 ಸಾವಿರ ಕೋಟಿ ವೆಚ್ಚದಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಕೆಲವೆಡೆ ಕಾಮಗಾರಿ ಕೊನೆಯ ಹಂತ ಕೂಡ ತಲುಪಿದೆ.
ಪ್ಯಾಕೇಜ್ - ರಸ್ತೆ ಉದ್ದ - ಮೊತ್ತ - ಎಲ್ಲಿಂದ ಎಲ್ಲಿಗೆ?